ಕೋಟಿಗೊಬ್ಬ-3 ನಾಳೆಯಿಂದ ತೆರೆಗೆ ನಳೆ
Posted date: 13 Wed, Oct 2021 11:57:59 AM
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ವಿಜಯದಶಮಿ ಹಬ್ಬದ ಕೊಡುಗೆಯಾಗಿ  ನಾಳೆಯಿಂದ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ  ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಸುದೀಪ್ ಹಾಗೂ ನಾಯಕಿ ಮಡೋನಾ ಸೆಬಾಸ್ಟಿಯನ್, ಅಭಿರಾಮಿ, ರವಿಶಂಕರ್  ಚಿತ್ರದ ಕುರಿತಂತೆ ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.  
   ಕೋಟಿಗೊಬ್ಬ ೨ ಸೀಕ್ವೇಲ್ ಆಗಿರುವ ಈ ಚಿತ್ರಕ್ಕೆ  ಸುದೀಪ್ ಅವರು ಕೊಟ್ಟ ಒಂದು ಎಳೆ ಇಟ್ಟುಕೊಂಡು ನಿರ್ದೇಶಕ   ಶಿವಕಾರ್ತೀಕ್ ಅದ್ಭುತವಾದ ಸ್ಕ್ರಿಪ್ಟ್ ಹೆಣೆದಿದ್ದಾರೆ.  ತಾನು ನಿರ್ವಹಿಸಿದ ಶಿವ, ಸತ್ಯನ ಪಾತ್ರಗಳನ್ನು ವಿವರಿಸಿದ ಸುದೀಪ್,  ಇದ್ದಕ್ಕಿದ್ದ ಹಾಗೆ ಕ್ಯಾರೆಕ್ಟರ್ ಚೇಂಜೋವರ್ ಮಾಡಿಕೊಂಡು ಅಭಿನಯಿಸಿದ ಸಂದರ್ಭ, ನಿರ್ಮಾಪಕರು ಮಾಡಿದ ಅದ್ದೂರಿ ವೆಚ್ಚದ ಕುರಿತಂತೆ ಮಾತನಾಡಿದರು.  ಬಹುತೇಕ ವಿದೇಶದಲ್ಲೇ ನಡೆಯುವ ಕಥೆಯಿದಾಗಿರುವುದರಿಂದ ಅಲ್ಲಿ ಶೂಟ್ ಮಾಡಿದ ಚೇಸಿಂಗ್ ಸೀನ್ ಅನುಭವ, ಅಲ್ಲಿನ ಪೋಲೀಸರು ಮಾಡಿಕೊಟ್ಟ ಅಚ್ಚುಕಟ್ಟಾದ  ವ್ಯವಸ್ಥೆ, ಅಲ್ಲಿನ ಜೂನಿಯರ್ ಆರ್ಟಿಸ್ಟ್ ಗಳಲ್ಲಿನ ಶಿಸ್ತು ಇದೆಲ್ಲವನ್ನೂ ಸುದೀಪ್ ಹೇಳಿದ್ದಾರೆ. 
ಪ್ರೇಮಂ ಚಿತ್ರದ ನಾಯಕಿ ಮಡೊನ್ನಾ ಸೆಬಾಸ್ಟಿಯನ್ ಈಗಾಗಲೇ ತಮಿಳು, ತೆಲುಗು ಮಲಯಾಳಂನಲ್ಲಿ ಅಭಿನಯಿಸಿದ್ದು, ಕನ್ನಡದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡಿದ್ದಾರೆ, ತನ್ನ ಪಾತ್ರವನ್ನು  ರಿವೀಲ್ ಮಾಡದೆ, ಸುದೀಪ್ ಜೊತೆ ಅಭಿನಯಿಸಿದ ಅನುಭವ ಹಂಚಿಕೊಂಡು, ತನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಮಾಡಿರುವುದಾಗಿಯೂ,  ತನ್ನ ಸಂಬಂಧಿಕರೂ ಇರುವುದಾಗಿ ಹೇಳಿದರು, ನಂತರ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಅಬಿರಾಮಿ ಮಾತನಾಡಿ ಬಹಳ ದಿನಗಳಾದ ಮೇಲೆ ಕನ್ನಡ ಚಿತ್ರ ಮಾಡಿದ್ದೇನೆ, ಒಬ್ಬ ಸ್ಟ್ರಾಂಗ್ ಕಾನ್ಫಿಡೆಂಟ್ ವುಮನ್, ನನ್ನಕ್ಕ ಈಥರ ಇರಬೇಕು ಅನಿಸುತ್ತದೆ, ನನಗೆ ಉದ್ದುದ್ದ ಡೈಲಾಗ್ ಇದ್ದವು, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ,  ಶಿವಕಾರ್ತೀಕ್ ಹೊಸ ನಿರ್ದೆಶಕ ಅನಿಸಲಿಲ್ಲ, ತುಂಬಾ ಸಿನಿಮಾ ಮಾಡಿದ ನಿರ್ದೇಶಕರ ಹಾಗೆ ಫೀಲ್ ಆಯ್ತು. ಅವರಲ್ಲಿ ಪಾಸಿಟಿವಿಟಿ ಇದೆ, ಈ ಚಿತ್ರವನ್ನು ಐದಾರು ದೇಶಗಳಲ್ಲಿ ಶೂಟ್ ಮಾಡಿದ್ದಾರೆ ಎಂದು ಹೇಳಿದರು, ಖಳನಟ ರವಿಶಂಕರ್ ಮಾತನಾಡಿ  ಹಬ್ಬಕ್ಕೆ ಎರಡು ಸಿನಿಮಾ ಬರ್ತಿದೆ, ನಾನು ಎಲ್ಲೇ ಹೋದರೂ ಕೋಟಿಗೊಬ್ಬ ಬಗ್ಗೆಯೇ ಕೇಳ್ತಾರೆ, ನನ್ನ ಹಾಗೂ ಸುದೀಪ್ ಪಾತ್ರಗಳಷ್ಟೇ ಹಿಂದಿನ ಚಿತ್ರದಿಂದ ಕಂಟಿನ್ಯೂ ಆಗುತ್ತದೆ, ಒಂದು ಥ್ರಿಲ್ಲಿಂಗ್ ಸಬ್ಜೆಕ್ಟ್ ಇದೆ, ನಾನು ಶಿವ ಸತ್ಯ ಇಬ್ರೂ ಒಬ್ನೇ ಅಂತಿರ್ತೇನೆ, ಯಾರೂ ನಂಬ್ತಿರಲ್ಲ, ಫನ್, ಎಂಟರ್ಟೈನ್ಮೆಂಟ್ ಎಲ್ಲಾ ಇರುವಚಿತ್ರ, ನಮ್ಮ ಕಾಬಿನೇಶನ್ ವರ್ಕೌಟ್ ಆಗಿದೆ, ನಿರ್ಮಾಪಕರು ಎಲ್ಲೂ ಕಾಂಪ್ರಮೈಸ್ ಆಗದೆ ಖರ್ಚು ಮಾಡಿದ್ದಾರೆ,  ಹಾಲಿವುಡ್ ರೇಂಜಿನಲ್ಲಿ ಸಿನಿಮಾ ಮೂಡಿಬಂದಿದೆ ಎಂದು ಹೇಳಿದ್ದಾರೆ,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed