ನಟಿ,ಸಂಸದೆ ಸುಮಲತಾ ಅಂಬರೀಷ್ ಮತ್ತು ರಾಕ್‌ಲೈನ್‌ ವೆಂಕಟೇಶ್ `ಕಡ್ಚ` ಪೋಸ್ಟರ್ ಬಿಡುಗಡೆ ಮಾಡಿದರು
Posted date: 27 Sat, Nov 2021 01:06:42 PM
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಕಡ್ಚ’ ಚಿತ್ರದ ಮೋಷನ್ ಪೋಸ್ಟರ್‌ನ್ನು ನಟಿ,ಸಂಸದೆ ಸುಮಲತಾಅಂಬರೀಷ್ ಮತ್ತು ರಾಕ್‌ಲೈನ್‌ವೆಂಕಟೇಶ್ ಅವರುಗಳು ಪುನೀತ್‌ರಾಜ್‌ಕುಮಾರ್ ಸಮಾಧಿ ಬಳಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಡಿಬರಹದಲ್ಲಿ ದೆವ್ವದ ಮರವೆಂದು ಹೇಳಿಕೊಂಡಿದೆ. ಸಂಸ್ಕ್ರತ ಶೀರ್ಷಿಕೆಯಾಗಿದ್ದು ಟೈಟಲ್‌ಗೆ ಮರ ಅರ್ಥಕೊಡುತ್ತದೆ. ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಕತೆಯಾಗಿದೆ. ಪಟ್ಟುಕೊಟೈ ಶಿವ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.  ಕಾರ್ತಿಕ್‌ಚರಣ್ ನಾಯಕ. ಮಹನ ನಾಯಕಿ. ಇನ್ನುಳಿದಂತೆ ತಮಿಳು ನಟ,ನಿರ್ದೇಶಕ ಭಾಗ್ಯರಾಜ್, ನಿಜಲ್‌ಗಲ್ ರವಿ, ಗಂಜಕರುಪು, ನಲ್ಲೈಸಿವ, ಬೆಂಜಮಿನ್, ರತ್ಚಸನ್‌ಯಸರ್, ಅಬ್ದುಲ್‌ಕಲಾಂ, ಸ್ಟೆಲ್ಲಾ, ಸತ್ಯ, ವಿಶ್ವ, ಮೈತ್ರಿಯಾ, ಸಾಯಿಮಧು, ಮುಕಿಲನ್, ವಿಕ್ರಂ, ಸಾರಥಿ, ಹರಿ, ಪ್ರಿಯಾ ಮುಂತಾದವರು ನಟಿಸಿದ್ದಾರೆ.  
 
ಶ್ರೀ ಶಿವಶಕ್ತಿ ಮುನಿಶ್ವರ್ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಶ್ಯಾಮಲ ರಮೇಶ್ ನಿರ್ಮಾಣ ಮಾಡಿರುವುದು ನೂತನ ಅನುಭವ. ಉನ್ನಿಮೆನನ್-ಕಾರ್ತಿಕ್-ಕಾರ್ತಿಕ ಕಂಠದಲ್ಲಿ ಮೂಡಿಬಂದಿರುವ ಹಾಡುಗಳಿಗೆ ವರನ್‌ವಿಜೆ ಚಾರ್ಲಿ ಸಂಗೀತ ಸಂಯೋಜಸಿದ್ದಾರೆ. ಛಾಯಾಗ್ರಹಣ ಕೆ.ಎಸ್.ಪಳನಿ, ಸಂಕಲನ ಅನೊ, ನೃತ್ಯ ಸೆಲ್ವಿ ಅವರದಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಕನ್ನಡ ಸೇರಿದಂತೆ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed