ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ ``ಹೊಯ್ಸಳ``ಚಿತ್ರದ ಶೀರ್ಷಿಕೆ ಅನಾವರಣ
Posted date: 15 Sat, Jan 2022 07:11:21 PM
ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡು ಅತ್ಯಂತ ಜನಪ್ರಿಯವಾದ, ಜನಮನ ಗೆದ್ದ ಚಿತ್ರ ``ರತ್ನನ್ ಪ್ರಪಂಚ`` ಚಿತ್ರದ ನಿರ್ಮಾಪಕರೇ ಆದ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 
ಹೊಂಬಾಳೆ ಸಂಸ್ಥೆಯ ಸಂಸ್ಥಾಪಕರಾದ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಅರ್ಪಿಸುತಿದ್ದಾರೆ. 
 ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಈ ಹಿಂದೆ ``ಗೀತಾ`` ಚಿತ್ರ ನಿರ್ದೇಶಿಸಿದ್ದ ವಿಜಯ್ ಏನ್ ಅವರು ಹೊರಲಿದ್ದಾರೆ. 
ಈ ಚಿತ್ರಕ್ಕೆ ಸಂಗೀತವನ್ನು ದಕ್ಷಿಣ ಭಾರತದ ಬಹಳ ಯಶಸ್ಸಿ ಸಂಗೀತ ನಿರ್ದೇಶಕರಾದ ಎಸ್ .ಎಸ್ .ತಮನ್ ಅವರು ನೀಡಲ್ಲಿದ್ದಾರೆ . 
ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ ಮಾಡಲ್ಲಿದ್ದಾರೆ .
ವಿಶ್ವಾಸ್ ಕಶ್ಯಪ್  ಅವರು  ಕಲಾ ನಿರ್ದೇಶಕರಾಗಿದ್ದು ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆಯಲ್ಲಿದ್ದಾರೆ . 
ಚಿತ್ರಕ್ಕೆ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಅವರು ಕೈಜೋಡಿಸಲಿದ್ದಾರೆ. ಚಿತ್ರದ ಪ್ರಚಾರವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ಮಾಡಲಿದೆ. 

ಈ ಚಿತ್ರದ ನಾಯಕ ನಟರಾಗಿ ಬಹುಮುಖಿ ಕಲಾವಿದರೆಂದು ಜನಮನ್ನಣೆ ಪಡೆದ ಧನಂಜಯ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಧನಂಜಯ ಅವರ ೨೫ ನೇ ಚಿತ್ರವೂ ಆಗಿದೆ. ಅವರಿಗೆ ವಯಕ್ತಿಕವಾಗಿ ಇದೊಂದು ದೊಡ್ಡ ಮೈಲಿಗಲ್ಲು. 
ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜೆಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ.  
ಚಿತ್ರದ ಒಂದು ಚಿಕ್ಕ ಎಳೆ ಹೇಳಬೇಕೆಂದರೆ , ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್  ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ. 
ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ . ಚಿತ್ರದಲ್ಲಿ ನಟಿಸಲಿರುವ ಎಲ್ಲ ಕಲಾವಿದರ ಆಯ್ಕೆಯನ್ನು  ಚಿತ್ರ ನಿರ್ಮಾಣ ತಂಡ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಅದನ್ನು ನಿಮ್ಮ ಮುಂದೆ ಹಂಚಿಕೊಳ್ಳಲ್ಲಿದ್ದಾರೆ . 

 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed