ಜಿ.ವಿ.ಅಯ್ಯರ್ ಪುತ್ರನ ಸಾರಥ್ಯದಲ್ಲಿ ಭೂನಾಟಕ ಮಂಡಳಿ
Posted date: 07 Wed, Sep 2022 08:59:52 AM
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಪುತ್ರ ಜಿ.ವಿ. ರಾಘವೇಂದ್ರ ಅಯ್ಯರ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಜಯನಗರದಲ್ಲಿ ಜೀವಿ ಅಯ್ಯರ್ ಸಿನಿಮಾಲೋಕ ಎಂಬ ಪೋಸ್ಟ್ ಪ್ರೊಡಕ್ಷನ್ಸ್ ಡಿಜಿಟಲ್ ಸ್ಟುಡಿಯೋವೊಂದನ್ನು ನಡೆಸುತ್ತಿರುವ ಇವರು ಜಿವಿ ಅಯ್ಯರ್ ಪ್ರೊಡಕ್ಷನ್ಸ್ ಆರಂಭಿಸಿ ಆ ಮೂಲಕ ಚಿತ್ರವೊಂದನ್ನು ನಿರ್ಮಿಸಿದ್ದಾರೆ. 
 
ನಶಿಸುತ್ತಿರುವ ಕೌಟುಂಬಿಕ ಮೌಲ್ಯಗಳ ನಡುವೆ ಮಕ್ಕಳು ತಮ್ಮ ಹಿರಿಯರಿಂದ ಆತ್ಮ ವಿಶ್ವಾಸವನ್ನು ಹೇಗೆ ಪಡೆದು ಸಮಾಜಸ ಸವಾಲುಗಳನ್ನು ಎದುರಿಸುತ್ತಾರೆ ಎಂಬ ಕಥಾನಕ ಇಟ್ಟುಕೊಂಡು `ಭೂನಾಟಕ ಮಂಡಳಿ` ಎಂಬ ಚಲನಚಿತ್ರವನ್ನು ರಾಘವೇಂದ್ರ ಅವರೇ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನೆರವೇರಿತು. ಮಾಸ್ಟರ್ ತುಷಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರಾಜೇಶ್ ಕೃಷ್ಣನ್  ಸ್ಪರ್ಷ ರೇಖಾ ಈತನ ತಂದೆ, ತಾಯಿಯಾಗಿ ನಟಿಸಿದ್ದಾರೆ.
 
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ರಾಘವೇಂದ್ರ ನನ್ನ ಬಾಲ್ಯದ ಕನಸು ನನಸಾಯಿತು, 2017ರಲ್ಲಿ ನಮ್ಮ ತಂದೆಯವರ ನೂರನೇ ಜನ್ಮದಿನದ ನೆನಪಿಗಾಗಿ ಈ ಚಿತ್ರವನ್ನು ಆರಂಭಿಸಿದೆವು. ಚಿತ್ರವನ್ನು ಬಿಡುಗಡೆ ಮಾಡಬೇಕೆನ್ನುವ ವೇಳೆಗೆ ಕೊರೋನಾ ಬಂದು ೨ ವರ್ಷ ಮುಂದೆ ಹೋಯಿತು. ಇದು ನೈಜಘಟನೆ ಆಧಾರಿತ ಚಿತ್ರವೂ ಆಗಿದ್ದು, ಮಕ್ಕಳ ಎದುರೇ ತಪ್ಪು ಮಾಡುವವರಿಗೆ  ಮಕ್ಕಳಿಂದಲೇ ಸಂದೇಶ ಸಂದೇಶ ಹೇಳುವ ಪ್ರಯತ್ನ. ತಂದೆ ತಾಯಿಗಳಿಗೆ ಅವರ ಸಿನಿಮಾ  ಆಗಿ ಕಂಡರೆ, ಮಕ್ಕಳಿಗೆ ಮಕ್ಕಳ ಸಿನಿಮಾ ಥರಾನೇ ಕಾಣಿಸುತ್ತದೆ. ನಮ್ಮ ಸಂಸ್ಥೆಯಿಂದ  ಪ್ರತಿವರ್ಷ ಸಿನಿಮಾ ಮಾಡುವ ಉದ್ದೇಶವಿದೆ ಎಂದು ಹೇಳಿದರು. 
   
ನಂತರ ನಟ ರಾಜೇಶ್ ಕೃಷ್ಣನ್ ಮಾತನಾಡಿ ಈ ಚಿತ್ರದ ಅನುಭವ ಅನ್ನುವುದಕ್ಕಿಂತ ಹೋಮ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದಂತಾಗಿದೆ. ಈ ಚಿತ್ರ ಹಿಂದೆಯೇ ಆರಂಭವಾಗಿತ್ತು. ಇದು ಯಾವುದೇ ಟೈಮ್ ಪಿರಿಯಡ್‌ಗೂ ಅನ್ವಯಿಸುವಂಥ ಸಬ್ಜೆಕ್ಟ್. ತುಂಬಾ ಲೇರ‍್ಸ್ ಒಳಗೊಂಡಿರುವ ಹಲವಾರು ದೃಷ್ಟಿಕೋನಗಳ ಚಿತ್ರವಿದು. ಸಮಾಜ, ಮಕ್ಕಳು, ಮನೆಯ ವಾತಾವರಣ, ಆಚೆಯ ವಾತಾವರಣ ಎಲ್ಲವನ್ನೂ ಸೇರಿಸಿ ತುಂಬಾ ಶ್ರಮವಹಿಸಿ ಮಾಡಿರೋ ಸಾಕಷ್ಟು ಮೌಲ್ಯಗಳನ್ನು ಹೊಂದಿದ ಚಿತ್ರ ಎಂದು ಹೇಳಿದರು.
 
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಕ ತುಶಾರ್ ಮಾತನಾಡಿ ವರ್ಷಗಳ ಹಿಂದೆಯೇ ಸಿನಿಮಾ ಆಗಿತ್ತು, ಆಗಿನ್ನೂ ನಾನು ಚಿಕ್ಕವನು. ಶೂಟಿಂಗ್ ಸಮಯದಲ್ಲಿ ನನಗೆ ಕಥೆ ಅರ್ಥವಾಗಿರಲಿಲ್ಲ, ಈಗ ಟ್ರೈಲರ್ ನೋಡಿದಾಗ ಒಂದು ಚಿತ್ರಣ ಮೂಡಿಬಂತು ಎಂದು ಹೇಳಿದರು. ಮಕ್ಕಳಿಗೆ ನಾವು ಏನಾದರೂ ಹೇಳುವಾಗ ಅದನ್ನು ಯಾವ ಸಮಯದಲ್ಲಿ, ಹೇಗೆ ಹೇಳುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. 
 
ವೃಧ್ದಾಶ್ರಮದ ಬಗ್ಗೆಯೂ ಚಿತ್ರದಲ್ಲಿ ವಿವರಣೆಯಿದೆ. ಪೋಷಕರ ಒತ್ತಡದಿಂದ ಮಕ್ಕಳು ಹೇಗೆ ಗಟ್ಟಿ ನಿರ್ಧಾರ ತೆಗೆದುಕೊಳ್ತಾರೆ ಎಂಬುದನ್ನೂ ಈ ಚಿತ್ರದಲ್ಲಿ ಹೇಳಲಾಗಿದೆ. ಸೆ.೨೩ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದೂ ನಿರ್ದೇಶಕ ಹಾಗೂ ನಿರ್ಮಾಪಕ ಜಿವಿ ರಾಘವೇಂದ್ರ ಅವರು ವಿವರಿಸಿದರು. ಉಳಿದಂತೆ ಮಾ.ಮಹೇಂದ್ರ, ವೀಣಾರಾವ್, ಸುಜಾತ ರಾಘವೇಂದ್ರ ಅಯ್ಯರ್ ಸೇರಿದಂತೆ ಬಹುತೇಕ ಚಿತ್ರತಂಡವೇ ಅಲ್ಲಿ ಹಾಜರಿತ್ತು. ಚಿತ್ರಕ್ಕೆ ಗುರುರಾಜ ಮಾರ್ಪಳ್ಳಿ ಅವರ ಸಂಗೀತ, ಸಾಹಿತ್ಯವಿದ್ದು, ರಾಜು ಶಿರಾಳಕೊಪ್ಪ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed