9 ನೇ ತಾರೀಖು, 9 ನೇ ತಿಂಗಳು ``9 ಸುಳ್ಳು ಕಥೆಗಳು`` ಚಿತ್ರ ತೆರೆಗೆ
Posted date: 08 Thu, Sep 2022 02:06:29 PM
ರಂಗಭೂಮಿಯಲ್ಲಿ ಹಲವು ವರ್ಷಗಳ ಅನುಭವವಿರುವ ಮಂಜುನಾಥ್ ಮುನಿಯಪ್ಪ ನಿರ್ಮಿಸಿ, ನಿರ್ದೇಶಿಸಿರುವ "9 ಸುಳ್ಳು ಕಥೆಗಳು" ಚಿತ್ರ ಇದೇ ಶುಕ್ರವಾರ ಅಂದರೆ 9.9.22 ರಂದು ಬಿಡುಗಡೆಯಾಗುತ್ತಿದೆ.

ನಮ್ಮ ಚಿತ್ರದಲ್ಲಿ ನವರಸಗಳನ್ನು ಆಧರಿಸಿದ ಒಂಭತ್ತು ಕಥೆಗಳಿದೆ. ನೈಜಘಟನೆಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ಇದೇ 9 ನೇ ತಾರೀಖು ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಮುನಿಯಪ್ಪ.

ಸಾಕಷ್ಟು ರಂಗಭೂಮಿ ಕಲಾವಿದರ ಸಮಾಗಮದಲ್ಲಿ ಸಿದ್ದವಾಗಿರುವ ಚಿತ್ರವಿದು. ನಾನು ಈ ಚಿತ್ರದಲ್ಲಿ ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ವಿನಾಯಕ ಜೋಶಿ. ಚಿತ್ರದಲ್ಲಿ ಅಭಿನಯಿಸಿರುವ ಜಯಲಕ್ಷ್ಮಿ ಪಾಟೀಲ್ ಸಹ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತ ನಿರ್ದೇಶಕರಾದ ಪ್ರವೀಣ್ - ಪ್ರದೀಪ್, ಛಾಯಾಗ್ರಾಹಕ ಪರಮೇಶ್, ಹಾಡು ಬರೆದಿರುವ ಸತೀಶ್ ಬೆಲ್ಲೂರು ಹಾಗೂ ವಿಕ್ರಮ್ ವಸಿಷ್ಠ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು.

ರಿಷಬ್ ಶೆಟ್ಟಿ ಮೊದಲ ಬಾರಿಗೆ ಹಾಡಿರುವ ಕನ್ನಡದ ಕುರಿತಾದ ಹಾಡು ಈಗಾಗಲೇ ಬಾರಿ ಜನಪ್ರಿಯವಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ರಕ್ಕೆ  ಧ್ವನಿ ನೀಡಿರುವುದು ಈ ಚಿತ್ರದ ವಿಶೇಷಗಳಲ್ಲೊಂದು. 

ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed