?ಸ್ಟಾರ್ ರ್ಕ್ರಿಯೇಟರ್ಸ್ ಹೊಸ ಚಿತ್ರ ?ರಜನಿ?
Posted date: 22/March/2009

ಚಲನ ಚಿತ್ರ ಜಗತ್ತನ್ನು ಪ್ರವೇಶಿಸಬಯಸುವವರಿಗೆ ದಾರಿದೀಪವಾಗಿರುವ ಸ್ಟಾರ್ ಕ್ರಿಯೇಟರ್‍ಸ್ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಅನೇಕ ಪ್ರತಿಭೆಗಳನ್ನು ಬೆಳ್ಳಿತೆಗೆರೆ ಕೊಡುಗೆಯಾಗಿ ನೀಡಿದೆ. ಭೂಗತ ಲೋಕದ ವ್ಯಕ್ತಿಗಳ ಹೃದಯದಲ್ಲಿಯೂ ಹೃದಯವಂತಿಕೆ ಇರುತ್ತದೆ ಎಂಬುದನ್ನು ವಾರಸ್ಧಾರ ಚಿತ್ರದ ಮೂಲಕ ತೋರಿಸಿಕೊಟ್ಟ ಈ ಸಂಸ್ಥೆ ಇದೀಗ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಸಂಸ್ಥೆಯ ನಿರ್ದೇಶಕರಾದ ಗುರುದೇಶಪಾಂಡೆ ಅವರ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹೆಸರು ರಜನಿ ದಿ ಸೂಪರ್‌ಸ್ಟಾರ್, ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು, ಇಂದಿನ ಯುವ ಪೀಳಿಗೆಯ ಹೃದಯದ ಮಿಡಿತವನ್ನು ಆಳವಾಗಿ ಅಭ್ಯಸಿಸಿ ಈ ಚಿತ್ರದ ಕಥೆಯನ್ನು ನಿರ್ದೇಶಕ ಗುರುದೇಶಪಾಂಡೆ ರಚಿಸಿದ್ದಾರೆ. ಶ್ರೀಮತಿ ಶಿಲ್ಪಾ ದೇಶಪಾಂಡೆ ಅವರ ನಿರ್ಮಾಣದ ಈ ಚಿತ್ರಕ್ಕೆ ಶಂಕರ್‌ರವರ ಸಂಗೀತ ಸಂಯೋಜನೆ ಹಾಗೂ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಪ್ರೀತಿಸುವ ಹೃದಯಗಳಿಗೆ ಹಿರಿಯರ ಅಡ್ಡಿ ಆತಂಕ, ಹಲವಾರು ಅಡೆ-ತಡೆಗಳ ನಡುವೆಯೂ ಹೆಮ್ಮರವಾಗಿ ಬೆಳೆಯುವ ಪ್ರೀತಿ ಇಂಥ ಸಾಮಾನ್ಯವಾದ ಕಥೆಯನ್ನು ಹೊಸ ರೀತಿಯಲ್ಲಿ ಹೇಳ ಹೊರಟಿದ್ದಾರೆ ಗುರುದೇಶಪಾಂಡೆ ಈ ಚಿತ್ರದಲ್ಲಿ ಸ್ಟಾರ್ ಕ್ರಿಯೇಟರ್‍ಸ್‌ನ ಪ್ರತಿಭಾವಂತ ವಿದ್ಯಾರ್ಥಿಗಳೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರ ಜೊತೆಗೆ ಹೆಸರಾಂತ ಹಿರಿಯ ಕಲಾವಿದರೂ ಕೂಡ ಅತಿಥಿ ಪಾತ್ರ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬರುವ ಏಪ್ರಿಲ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಿ ಒಂದೇ ಹಂತದಲ್ಲಿ ಮುಗಿಸುವ ಪ್ಲಾನ್ ಹಾಕಿಕೊಂಡಿರುತ್ತಾರೆ ನಿರ್ಮಾಪಕರಾದ ಶಿಲ್ಪಾದೇಶಪಾಂಡೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed