"A" ಎಂಟರ್‌ಟೈನರ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಬಿ.ಜಿ. ಮಂಜುನಾಥ್, ರಾಜು ಜಗನ್ನಾಥ್, ಅಜಯ್ ನಿರ್ಮಿಸಿರುವ ಉಪ್ಪಿ ಅಬಿನಯದ "A " ಚ್ಚಲ ಯಶಸ್ವಿ ಎ ಚಿತ್ರಕ್ಕೆ ಈಗ ರಜತೋತ್ಸವ ವರ್ಷದ ಸಂಭ್ರಮ. ಈ ಚಿತ್ರದ ಮೂಲಕ ನಾಯಕ ನಟ ಉಪೇಂದ್ರ ನಾಯಕನಾಗಿ ಕನ್ನಡ ಚಿತ್ರರಂಗ ಸೇರ್ಪಡೆಯಾದರು.
ಈಗ ಇದೇ ಚಿತ್ರದ ನಿರ್ಮಾಪಕರು ಮತ್ತೊಂದು ಚಿತ್ರವನ್ನು ನಿರ್ಮಿಸುತ್ತಿದ್ದು, ಇನ್ನು ಹೆಸರಿಡದ ಪೋಡಕ್ಷನ್ ನಂ.2 ಚಿತ್ರದಲ್ಲೂ ಉಪೇಂದ್ರ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ಚಿತ್ರವು ಕನಕದಾಸರ ಜೀವನವನ್ನಾಧರಿಸಿದ ಭಕ್ತಿ ಪ್ರಧಾ ಚಿತ್ರ. ಚಿತ್ರಕ್ಕೆ ಜಿ.ಕೆ. ಭಾರವಿ ಕಥೆ, ಹಂಸಲೇಖಾರ ಸಾಹಿತ್ಯ ಸಂಗೀತ, ಸುರೇಶ್ ಅರಸ್ ಸಂಕಲನವಿದ್ದು, ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದಾರೆ . ಚಿತ್ರದ ಉಳಿದ ತಾರಾಗಣ ಮತ್ತು ತಾಂತ್ರಿಕ ವವರ್ಗದ ಆಯ್ಕೆ ಭರದಿಂದ ಸಾಗಿದೆ.