N-1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ಸ್ WWCL ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ
Posted date: 23 Sat, Nov 2024 07:45:33 PM
ಗಂಡುಮಕ್ಕಳಿಗಾಗಿಯೇ ಇಷ್ಟು ದಿನ‌ ಇದ್ದ ಟಿಪಿಎಲ್, IPT12ಯಂತಹ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಸಕ್ಸಸ್ ಕಂಡಿರುವ N1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ ಆರ್ ರವರು ಮೊದಲ ಬಾರಿಗೆ ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಏರ್ಪಡಿಸಿದ್ದಾರೆ..ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ WWCL ಲೋಗೋ ಜೆರ್ಸಿ ಲಾಂಚ್ ಕಾರ್ಯಕ್ರಮ ನಡೆಯಿತು.. ಇದೇ ವೇಳೆ ಬ್ಯೂಟಿಸ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

ಟಿಪಿಎಲ್ ಹಾಗೂ PROFESSIONALS ಗಾಗಿ IPT12 ಟೀಮ್ ಗಳ ಸ್ಟಾರ್ ಬ್ರಾಂಡ್ ಅಂಬಾಸಿಡರ್ ಆಗಿ ಟೀಮ್ ಜೆರ್ಸಿ ತೊಟ್ಟು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡ್ತಿದ್ದ ನಾಯಕಿಯರು ಈಗ ತಾವೇ ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಆಡ್ತಿವಿ...ನಾವು ಯಾರಿಗೂ ಕಮ್ಮಿ ಇಲ್ಲ ಅಂತಿದ್ದಾರೆ. ಈ ಟೂರ್ನಮೆಂಟ್ ನಲ್ಲಿ ಒಟ್ಟು 98 ನಟಿಯರು ಆಟ ಆಡಲಿದ್ದು,  ಮುಂದಿನ ತಿಂಗಳ  ಡಿಸಂಬರ್ ನಲ್ಲಿ WWCL ಮ್ಯಾಚ್ ಆಡಿಸಲು ಸಕಲ ಸಿದ್ದತೆ ಮಾಡಲಾಗಿದೆ..

ತಂಡಗಳು, ಓನರ್ ಹಾಗೂ ಕ್ಯಾಪ್ಟನ್
1.AVR ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ದಿವ್ಯಾ ಸುರೇಶ್
2.ಎಂಆರ್ ಫ್ಯಾಂಥರ್ಸ್ಸ್-ಮಿಥುನ್ ರೆಡ್ಡಿ-ದಿವ್ಯಾ ಉರುಡುಗ
3.ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
4.ವಿನ್ ಟೈಮ್ ರಾಕರ್ಸ್ಸ್-ಅನಿಲ್ ಕುಮಾರ್ ಬಿ.ಆರ್-ಆಶಾ ಭಟ್
5.ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
6.ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
7.ಖುಷಿ 11-ಭೂಮಿ ಶೆಟ್ಟಿ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed