SRiKRISHNA@ Gmail. Com ವಿಜಯ ದಶಮಿಗೆ ಅದ್ದೂರಿ ಬಿಡುಗಡೆ
Posted date: 30 Thu, Sep 2021 12:37:38 PM
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ, ನಾಗಶೇಖರ್ ನಿರ್ದೇಶನ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಚಿತ್ರ.

 ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೆಮ್ಮೆಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಎಂ.ಎಲ್. ಸಿ (ರಾಷ್ಟಪ್ರಶಸ್ತಿ ವಿಜೇತ)
ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಿಸಿರುವ srikrishna@gmail.com ಚಿತ್ರ ವಿಜಯ ದಶಮಿಯ ಶುಭದಿನದಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.  ಬೃಂದಾ ಎನ್ ಜಯರಾಂ ಈ ಚಿತ್ರದ ಸಹ ನಿರ್ಮಾಪಕರು.
ಖ್ಯಾತ ನಿರ್ದೇಶಕ ನಾಗಶೇಖರ್ ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದು  ಚಿತ್ರಕಥೆಯನ್ನು ನಾಗಶೇಖರ್ ಹಾಗೂ ಪ್ರೀತಂಗುಬ್ಬಿ ಬರೆದಿದ್ದಾರೆ

 ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ  ಭಾವನಾ ಮೆನನ್ ನಟಿಸಿದ್ದಾರೆ.  ಚಂದನ್ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್,ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ. 

ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ "ಅಮರ್" ಚಿತ್ರವನ್ನು ನಾಗಶೇಖರ್ ಅವರೆ ನಿರ್ದೇಶಿಸಿದ್ದರು.

  ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ.  ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ _srikrishna@gmail.com_ ಚಿತ್ರಕ್ಕೆ ದೀಪು ಎಸ್ ಕುಮಾರ್  ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed