ತಾಂತ್ರಿಕವಾಗಿ ದುರಸ್ಥಿಯಲ್ಲಿರೋ ಸಂತೋಷ್ ಬದಲಾಗಿ ಅದೇ ಕೆ.ಜಿ. ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರವನ್ನ ಸಲಗ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ತ್ರಿವೇಣಿ ಚಿತ್ರಮಂದಿರ ತಾಂತ್ರಿಕವಾಗಿ ನವೀಕರಣಗೊಂಡಿದ್ದು, 4K ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್ ನ ಅಳವಡಿಸಲಾಗಿದೆ.
14ನೇ ತಾರೀಖು ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ ಚಿತ್ರ ರಿಲೀಸ್ ಆಗ್ತಿದೆ.
ಸಲಗ ಅಭಿಮಾನಿಗಳ ಸಂಭ್ರಮ ಸಡಗರ ಎಲ್ಲವೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲೇ ನಡೆಯಲಿದೆ.