`ಓ ಮೈ ಲವ್` ಟೀಸರ್ ಮೆಚ್ಚಿದ ಟಾಲಿವುಡ್ ನಿರ್ದೇಶಕ ಕೆ.ರಾಘವೇಂದ್ರರಾವ್
Posted date: 21 Sat, May 2022 01:19:33 PM
ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶನದ `ಓ ಮೈ ಲವ್` ಚಿತ್ರದ ಹಾಡು ಹಾಗೂ ಗ್ಲಿಂಪ್ಸ್ ಸಖತ್ ಸದ್ದು ಮಾಡುತ್ತಿವೆ. ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ತೆಲುಗಿನ  ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವ್ `ಓ ಮೈ ಲವ್` ಗ್ಲಿಂಪ್ಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು  ಸ್ಮೈಲ್ ಶ್ರೀನು ಹಾಗೂ  ಚಿತ್ರತಂಡಕ್ಕೆ ಮತ್ತಷ್ಟು ಹುಮ್ಮಸ್ಸು  ನೀಡಿದೆ. ಹೈದರಾಬಾದ್`ನ ತಮ್ಮ  ಕಚೇರಿಯಲ್ಲಿ `ಓ ಮೈ ಲವ್` ಚಿತ್ರದ ಗ್ಲಿಂಪ್ಸ್ ವೀಕ್ಷಿಸಿದ ಅವರು `ಇತ್ತೀಚೆಗೆ ಕನ್ನಡ ಸಿನಿಮಾಗಳ ಗುಣಮಟ್ಟ ದೊಡ್ಡ ಮಟ್ಟದಲ್ಲಿದೆ. ಎಲ್ಲಾ ಸಿನಿಮಾಗಳೂ ಹೀಗೆ ಬರಬೇಕು. ಹೊಸ ಪ್ರತಿಭೆಗಳು ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ. ಈ ಗ್ಲಿಂಪ್ಸ್ ನೋಡುತ್ತಿದ್ದರೆ ಸಿನಿಮಾ ಖಂಡಿತಾ ಚೆನ್ನಾಗಿದೆ ಎನಿಸಿದೆ, ಚಿತ್ರಕ್ಕೆ ಯಶಸ್ಸು ಸಿಗಲಿ. ಸಾಧ್ಯವಾದರೆ ತೆಲುಗಿಗೂ ಈ ಸಿನಿಮಾವನ್ನು ಡಬ್ ಮಾಡಿ. ನಮ್ಮ ಸಪೋರ್ಟ್ ಸದಾ ನಿಮ್ಮಂಥ ಪ್ರತಿಭೆಗಳಿಗೆ ಇದ್ದೇ ಇರುತ್ತದೆ`ಎಂದಿದ್ದಾರೆ.
 
ರಾಘವೇಂದ್ರ ರಾವ್ ಅವರ ಮಾತುಗಳಿಂದ ಪುಳಕಿತರಾಗಿರುವ ಸ್ಮೈಲ್ ಶ್ರೀನು, `ಓ ಮೈ ಲವ್` ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ ಬಳಿಕ ತೆಲುಗಿನಲ್ಲಿ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಹಾಡು ಹಾಗೂ ಟ್ರೇಲರ್ ಹರಿಬಿಡುವ ಯೋಜನೆಯಲ್ಲಿದ್ದಾರೆ ಶ್ರೀನು.
 
ಜಿ.ಸಿ.ಬಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರಕ್ಕೆ ಕಥೆ ಬರೆದು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ ಜಿ.ರಾಮಾಂಜಿನಿ. ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ಸ್ಮೈಲ್ ಶ್ರೀನು. ಚರಣ್ ಅರ್ಜುನ್ ಸಂಗೀತ ನೀಡಿರುವ ಈ ಚಿತ್ರದ ಎಲ್ಲಾ ಹಾಡುಗಳಿಗೆ ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.  ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.‌
 
ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಚಿತ್ರ ನಾಯಕ-ನಾಯಕಿ. ಹಿರಿಯ ನಿರ್ದೇಶಕ ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed