ಸಾಯಿ ಪಲ್ಲವಿ ಅಭಿನಯದ ``ಗಾರ್ಗಿ`` ಚಿತ್ರ ಜುಲೈ 15 ರಂದು ತೆರೆಗೆ
Posted date: 05 Tue, Jul 2022 09:43:40 AM
ಖ್ಯಾತ ನಟಿ ಸಾಯಿ‌ ಪಲ್ಲವಿ ಅಭಿನಯದ ``ಗಾರ್ಗಿ``ಚಿತ್ರ ಜುಲೈ ಹದಿನೈದರಂದು ಬಿಡುಗಡೆಯಾಗುತ್ತಿದೆ.  ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ.  ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ
ಬಿಡುಗಡೆಯಾಗುತ್ತಿದೆ. 

 ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ.

ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. 

ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed