ನಮ್ಮ ಹುಡುಗರು ಚಿತ್ರ ಜುಲೈ 8 ರಂದು ರಾಜ್ಯಾದ್ಯಂತ ಬಿಡುಗಡೆ
Posted date: 06 Wed, Jul 2022 10:54:22 AM
ನಾಲ್ವರು ಸ್ನೇಹಿತರ ಮಧ್ಯೆ ಹುಟ್ಟಿಕೊಳ್ಳುವ ಒಂದು ಸುಳ್ಳು ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಯಿತು ಎಂಬ ಎಳೆ ಇಟ್ಟುಕೊಂಡು ಯುವ ನಿರ್ದೇಶಕ ಹೆಚ್.ಬಿ. ಸಿದ್ದು ಅವರು  ನಿರ್ದೇಶಿಸಿರುವ ಚಿತ್ರ ನಮ್ಮ ಹುಡುಗರು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ  ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಜುಲೈ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ವಸಿಷ್ಠಸಿಂಹ ಅವರು ಈ ಚಿತ್ರದಲ್ಲಿ ಒಬ್ಬ ಕಲಾವಿದನಾಗೇ ಕಾಣಿಸಿಕೊಂಡಿದ್ದಾರೆ.    
 
ಬಿಡುಗಡೆ ತಯಾರಿ ಕುರಿತಂತೆ ನಡೆದ ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ನಿರ್ದೇಶಕ ಸಿದ್ದು, ಇದೇ ಶುಕ್ರವಾರ ನಮ್ಮ  ಚಿತ್ರ ಬಿಡುಗಡೆಯಾಗುತ್ತಿದ್ದು, ೬ರಂದು ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪ್ರೀರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.  ಅಂದು ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಡ್ಯದ ಹಿನ್ನೆಲೆಯಲ್ಲಿ  ನಡೆಯುವ ಕಥೆಯಿದು,  ಅಲ್ಲೊಂದು ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಮಿಥ್ಯ.  ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಿದ್ದೇವೆ. ಮಂಡ್ಯದಲ್ಲಿ  ಪ್ರಾರಂಭವಾಗಿ ಮಂಗಳೂರಿನಲ್ಲಿ ಎಂಡ್ ಆಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಿದ್ದೇವೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಿದ್ದೇವೆ. ಅಭಿಮನ್ ರಾಯ್ ಅವರು ಅದ್ಭುತವಾಗಿ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಜೊತೆಗೆ ಬಿಂದು. ಶಫಿಯಂಥ ಹೊಸ ಗಾಯಕರಿಗೆ ಅವಕಾಶ ನೀಡಿದ್ದೇವೆ. ಚಿತ್ರದಲ್ಲಿ ಕಥೆಯ ನೆರೇಶನ್ ವಿಶೇಷವಾಗಿದೆ. ಆರಂಭ ಅಂತ್ಯ ಎರಡೂ ಸ್ಪೆಷಲ್ ಎಲಿಮೆಂಟ್. ಅಲ್ಲದೆ ಚಿತ್ರದ ಎಲ್ಲಾ ಪಾತ್ರಗಳು ಕಥೆಯನ್ನು ಕ್ಯಾರಿ ಮಾಡುತ್ತವೆ. ಸಿನಿಮಾ ನೋಡಿದ ಉಪೇಂದ್ರ ಅವರು ಫಸ್ಟ್ ಅಟೆಂಪ್ಟ್ ಆದರೂ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಮೆಚ್ಚಿಕೊಂಡರು. ಲೆಂತ್ ಆಗುತ್ತೆ ಅಂತ ನಾವು ತೆಗೆದುಹಾಕಿದ್ದ ಸೀನನ್ನು ಕಥೆಗದು ಬೇಕು ಎಂದು ಮತ್ತೆ ಹಾಕಿಸಿದರು ಎಂದು ಸಿದ್ದು ವಿವರಿಸಿದರು.  
 
ನಂತರ ನಾಯಕ ನಿರಂಜನ್ ಮಾತನಾಡುತ್ತ ಹೀರೋ ಆಗಿ ನನ್ನ ಮೊದಲ ಚಿತ್ರವಿದು. ನಾರ್ಮಲ್ ಸಿನಿಮಾ ಇದಲ್ಲ. ಒಂದೊಳ್ಳೇ ಕಂಟೆಂಟ್ ಇದೆ. ರಿಯಲ್ ಲೈಫ್‌ನಲ್ಲಿ ಎಲ್ಲರಿಗೂ ಎಮೋಷನಲಿ ಕನೆಕ್ಟ್ ಆಗುವಂಥ ಸಬ್ಜೆಕ್ಟ್. ಚಿತ್ರದಲ್ಲಿ ಹಾಡುಗಳೂ ಹೈಲೈಟ್, ಇವತ್ತು ಹಾಡೊಂದನ್ನು ಶ್ರೀಮುರುಳಿ ಅವರು ಬಿಡುಗಡೆ ಮಾಡಿಕೊಟ್ಟರು. ಅಪ್ಪು ಅವರ ವೀಡಿಯೋ ಹಾಡನ್ನು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ರಾಗಣ್ಣ ರಿಲೀಸ್ ಮಾಡಲಿದ್ದಾರೆ. ಇಂಟರ್‌ವೆಲ್‌ಗೂ ಮುಂಚೆ ಬರುವ ಸೀನೊಂದನ್ನು ಬೆಟ್ಟದ ಮೇಲೆ ಶೂಟ್ ಮಾಡಿದ್ದೇವೆ. ಸಖತ್ ಹೈಟ್‌ಪೀಕ್‌ನಲ್ಲಿ ಮಾಡಿದ ಆ ಸೀನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್, ಪ್ರವೀಣ್ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್ ಆಗುತ್ತದೆ ಎಂದರು. ಚಿತ್ರದ ನಾಯಕಿ ರಾಧ್ಯ ಮಾತನಾಡುತ್ತ ಗೌರಿ ಎಂಬ
 
ಮಂಡ್ಯ ಹುಡುಗಿಯಾಗಿ ನಟಿಸಿದ್ದು, ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರವದು  ಎಂದರು. ಗೋಲ್ಡನ್ ಹಾರ್ಟ್ಸ ಮೂಲಕ ಕೆಕೆ. ಅಶ್ರಫ್ ಅವರ ನಿರ್ಮಾಣದ ಈ ಚಿತ್ರವನ್ನು ಜಯಣ್ಣ ಫಿಲಂಸ್ ಬಿಡಗಡೆ ಮಾಡುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed