ಡಾಲಿ ಪಿಕ್ಚರ್ಸ್ ನಿರ್ಮಾಣದ `ಬಡವ ರಾಸ್ಕಲ್` ಚಿತ್ರದ ಮೊದಲ ಹಾಡು ಉಡುಪಿ ಹೋಟೆಲು ಬಿಡುಗಡೆಯಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ. ಈ ಹಾಡಿಗೆ ಸಾಹಿತ್ಯವನ್ನು ಸ್ವತಃ ಡಾಲಿ ಧನಂಜಯ್ ಅವರು ಬರೆದಿದ್ದು, ಸಂಗೀತವನ್ನು ವಾಸುಕಿ ವೈಭವ್ ಅವರು ಸಂಯೋಜಿಸಿದ್ದಾರೆ. ಈ ಸುಮಧುರ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಜೀವ ತಂದಿದೆ. ಧನಂಜಯ್ ಅವರಿಗೆ ಅಮೃತ ಐಯ್ಯಂಗಾರ್ ಜೋಡಿಯಾಗಿ ನಟಿಸಿದ್ದಾರೆ. ಈ ಹಾಡು ಪ್ರೀತಿ ಮಾಡುವ ಪ್ರತಿ ಮನಸ್ಸಿಗೆ ಅರ್ಪಣೆ. ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೊಸ್ ಮೂಲಕ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಹಂಚಿಕೆ ಮಾಡುತ್ತಿದ್ದು, ಸಂಪೂರ್ಣ ಪ್ರಚಾರಕಲೆ ಇದರ ಅಂಗಸಂಸ್ಥೆಯಾದ ಕೆ ಆರ್ ಜಿ ಕನ್ನೆಕ್ಟ್ಸ್ ವಹಿಸಿಕೊಂಡಿದೆ. ಬಡವ ರಾಸ್ಕಲ್ ಸೆಪ್ಟೆಂಬರ್ ೨೪ರಿಂದ ಚಿತ್ರಮಂದಿರಗಳಲ್ಲಿ ನಿಮ್ಮನ್ನು ರಂಜಿಸಲು ಸಜ್ಜಾಗಿದ್ದಾನೆ.