ಉತ್ತರ ಕರ್ನಾಟಕದ ಕಾವೇರಿ ಪುರ
Posted date: 14 Fri, Oct 2022 09:05:38 AM
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕಾವೇರಿ ಪುರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿದ್ದರು. ರಾಯಚೂರಿನಲ್ಲಿ ಹಾರ್ಡ್‌ವೇರ್ ಶಾಪ್ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಾಂತಕುಮಾರ್.ವಿ.ಪಾಟೀಲ್ ಅವರು ಡಿವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹೆಸರಾಂತ ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡು, ಎರಡು ಸಿನಿಮಾಗಳಿಗೆ ಬರಹಗಾರನಾಗಿ ಗುರುತಿಸಿಕೊಂಡಿರುವ ನಿರ್ಣಯ್.ಡಿ.ಕೆ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಒಂದು ಹಾಡಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
 
ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕಥೆಯು ಕಾವೇರಿ ಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಘಟನೆಗಳು, ಅಲ್ಲಿ ಆಗು ಹೋಗುವಂತ ವಿಚಾರಗಳು. ಬಡವರಿಗೆ ದೊರಕಬಹುದಾದ ಸವಲತ್ತುಗಳು ಸಿಗುತ್ತಾ? ಸಿಗೋದಿಲ್ವಾ?. ಧಣಿ ಮಗಳನ್ನು ಪ್ರೀತಿ ಮಾಡಿದಾಗ ಅದರಿಂದ ಉಂಟಾಗುವ ರಾ ಅಂಶದ ಘರ್ಷಣೆಗಳು. ಸೊಕ್ಕಿನಲ್ಲಿ ಮರೆಯುವಂತ ಸ್ಥಳೀಯ ನಾಯಕರುಗಳನ್ನು ನಾಯಕನಾದವನು ಹೊಡದಾಡದೆ ಚಾಣಕ್ಷತನದಿಂದ ಅವರುಗಳ ಗುಣವನ್ನು ಹೇಗೆ ಬದಲಾಯಿಸುತ್ತಾನೆ. ಇದರ ಜತೆಗೆ ಲವ್, ಆಕ್ಷನ್, ಸೆಂಟಿಮೆಂಟ್, ಭಾವನೆಗಳು, ಹಾಸ್ಯ ತುಂಬಿದ ನವಿರಾದ ಕೌಟಂಬಿಕ ಸನ್ನಿವೇಶಗಳು ಕಾಣಸಿಗುತ್ತದೆ. 
 
ಮಧ್ಯಮ ವರ್ಗದ ಹುಡುಗನಾಗಿ ರಾಜಪ್ರತೀಕ ನಾಯಕ, ರಂಗಭೂಮಿ ಹಾಗೂ ಕಿರುಚಿತ್ರಗಳಲ್ಲಿ ನಟಿಸಿರುವ ಬೆಂಗಳೂರಿನ ಭೂಮಿಕಾಮಂಜುನಾಥ್ ನಾಯಕಿ. ಧಣಿಯಾಗಿ ಬಲರಾಜವಾಡಿ, ನಾಯಕಿ ತಾಯಿ ಪಾತ್ರದಲ್ಲಿ ಸುನಂದಾಕಲ್ಬುರ್ಗಿ ಇವರೊಂದಿಗೆ ಹನುಮಕ್ಕ, ಚೇತನಾ, ಕಿಶೋರ್.ಹೆಚ್, ರಾಮ್.ಜಿ, ಮಹಾಂತೇಶ್, ರಾಕೇಶ್, ಸಿದ್ದಾರ್ಥ, ರಘುರಾಮ್‌ಚರಣ್, ಹನುಮಂತರೆಡ್ಡಿ, ಆನಂದ, ಬಸವರಾಜ ಹೆಗ್ಗಣದೊಡ್ಡಿ, ಸಂಗಮನಾಥ.ಎಸ್.ಅಂಗಡಿ, ಹನುಮಂತಪ್ಪ ನಟಿಸುತ್ತಿದ್ದಾರೆ. ಕೆಜಿಎಫ್‌ನ ರವಿಬಸ್ರೂರು ಶಿಷ್ಯ ವಿ.ನಿತೀಶ್ ಸಂಗೀತ, ಹರ್ಷವರ್ಧನ.ಕೆ. ಛಾಯಾಗ್ರಹಣ, ಹಾಡುಗಳಿಗೆ ರವಿರಾಜ್ ಸಾಲಿಗ್ರಾಮ-ಕಿಶೋರ್.ಹೆಚ್ ಪೆನ್ನು ಕೆಲಸ ಮಾಡಿದೆ. ರಾಯಚೂರು, ಗುರುಗಂಟೆ, ಲಿಂಗಸುಗೂರು, ದೇವದುರ್ಗ, ಸುರಪುರ ಹಾಗೂ ಕೃಷ್ಣ-ತುಂಗಭದ್ರ ಎರಡು ನದಿಗಳ ನಡುವೆ ಒಟ್ಟು ಮೂವತ್ತು ದಿನಗಳ ಕಾಲ ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed