ಬಣ್ಣದ ಬದುಕಿನಐವರು ಹುಡುಗರ ಕಥನ
Posted date: 09 Tue, Nov 2021 11:42:01 AM
ಬಣ್ಣದ ಲೋಕ ಎಂಥವರನ್ನು ಆಕರ್ಷಿಸುತ್ತದೆ. ಅದರೊಳಗೆ ಹೋದರೆ ಕಷ್ಟಗಳು ಏನೆಂಬುದು ಎಂಬನ್ನು ತಿಳಿಸುವಂತ ಚಿತ್ರ ಗುಲಾಲ್‌ಡಾಟ್‌ ಕಾಮ್.ಐವರು ಹುಡುಗರ ಸುತ್ತ ಕತೆಯು ಸಾಗುತ್ತದೆ. ಸೆಟ್‌ ಒಂದರಲ್ಲಿ ನಡೆಯುವ ಅಡಿಷನ್ ಮೂಲಕ ಚಿತ್ರವು ತೆರೆದುಕೊಳ್ಳುತ್ತದೆ. ಒಬ್ಬೊಬ್ಬ ಪ್ರತಿಭೆಯೂತನ್ನ ನಟನಾ ಸಾಮರ್ಥ್ಯವನ್ನು ತೋರುತ್ತಿರುವಾಗಲೇ ಚಿತ್ರದಕುರಿತಂತೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಹುಡುಗರ ಬದುಕುಒಂದೊಂದು ವೃತ್ತಿ ಆಗಿರುತ್ತದೆ.ಸಿನಿಮಾ ಮಾಡುವ ಆಸೆಯಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಸಲ ಡ್ಯಾಶ್ ನಮ್ದೆ ಎಂಬ ಶೀರ್ಷಿಕೆಯೊಂದಿಗೆ ಕತೆಯನ್ನು ಸಿದ್ದಪಡಿಸಿ ನಿರ್ಮಾಪಕರ ಹುಡುಕಾಟ ನಡೆಸುತ್ತಾರೆ.ಇವರ ಪ್ರಯತ್ನಕ್ಕೆ ಬೆಂಬಲವಾಗಿ  ಗುರುಸ್ಥಾನದಲ್ಲಿ ಒಬ್ಬರು ಇರುತ್ತಾರೆ. ಶ್ರಮವಹಿಸಿ ಪ್ರಯತ್ನಪಟ್ಟರೆ ಖಂಡಿತಯಶಸ್ಸು ಸಿಗುತ್ತದೆ ಎಂಬ ಮಾಗದರ್ಶನದೊಂದಿಗೆ ಇವರುಗಳು ಮುಂದೆ ಸಾಗುತ್ತಾರೆ.ಜತೆಗೆ ಹುಡುಗಿಯರ ಸಹಕಾರ ಓಟಕ್ಕೆ ಪೂರಕವಾಗುತ್ತದೆ. 
ಒಂದು ಹಂತದಲ್ಲಿ ಎಲ್ಲವು ಸುಗಮವಾಗುತ್ತದೆ.ಕನಸು ನನಸಾಗುತ್ತದೆ. ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನುವಷ್ಟರಲ್ಲಿ ಅರಿಯದೆ ಎದುರಾಗುವತಿರುವು ಬದುಕಿಗೆ ಗೊಂದಲ ಉಂಟು ಮಾಡುತ್ತದೆ. ಅಂತಿಮವಾಗಿ ಹುಡುಗರು ಸಿನಿಮಾ ಮಾಡುತ್ತಾರಾ ಎಂಬುದು  ಚಿತ್ರಮಂದಿರಕ್ಕೆ ಹೊಕ್ಕರೆ ತಿಳಿಯುತ್ತದೆ.
ಗುರುವಾಗಿ  ತಬಲನಾಣಿ ಮಿಂಚಿದ್ದಾರೆ. ಉಳಿದಂತೆ ಬಿಗ್‌ ಬಾಸ್ ದಿವಾಕರ್, ಸದಾನಂದ ಖಾಲಿ, ಜೋಕರ್‌ ಹನುಮಂತು, ಶಂಕರ್‌ ಅಂಬಿಗೇರಿ, ಮಲ್ಲು ಜಮಖಂಡಿ. ಜೋಡಿಯಾಗಿ ನೇತ್ರಗಗನ್, ಪೂಜಾ, ರಾಜೇಶ್ವರಿ ಕಾಮತ್, ಸೋನು ಪಾಟೀಲ್ ಮತ್ತು ಅನಿತಾ ಸೂರ್ಯವಂಶಿ ಇದ್ದಾರೆ. ಪೋಲೀಸ್‌ ಅಧಿಕಾರಿಯಾಗಿ ಶೋಭರಾಜ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎರಡನೇ ಬಾರಿ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿರುವ  ಶಿವುಜಮಖಂಡಿ ಈ ಬಾರಿ ರಚನೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜವಬ್ದಾರಿಯನ್ನುಹೊತ್ತುಕೊಂಡಿರುವ ಶ್ರಮ ಸಾರ್ಥಕವಾಗಿದೆ. ಗೋಪಾಲಕೃಷ್ಣ ಹವಲ್ದಾರ್ ನಿರ್ಮಾಣ ಮಾಡಿದ್ದಾರೆ.ಡಬ್ಬಲ್ ಮೀನಿಂಗ್‌ಡೈಲಾಗ್‌ಅಲ್ಲಲ್ಲಿ ಕಚಗುಳಿ ಇಡುತ್ತದೆ. ಒಟ್ಟಾರೆ ಚಿತ್ರವು ಪೈಸಾ ವಸೂಲ್‌ ಎನ್ನಬಹುದು.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed