ಜನವರಿ 24ರಂದು `ತೋತಾಪುರಿ` ಮೊದಲ ಝಲಕ್
Posted date: 23 Sun, Jan 2022 � 01:52:34 PM
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ `ನೀರ್ ದೋಸೆ` ಮೂಲಕ ದೊಡ್ಡ ದಾಖಲೆ ಬರೆದಿದೆ. ಇದೇ ಜೋಡಿ `ತೋತಾಪುರಿ` ಮೂಲಕ ಸೆನ್ಸೇಷನ್  ಕ್ರಿಯೇಟ್ ಮಾಡಲು ಸನ್ನದ್ಧವಾಗಿದೆ. ಅದಕ್ಕಾಗಿ `ತೋತಾಪುರಿ` ಮೊದಲ ಝಲಕ್ ಕೂಡ ಸಿದ್ಧವಾಗಿದ್ದು ಇದೇ ಜನವರಿ 24ರಂದು ಆಡಿಯೋ ಟೀಸರ್ ಮೂಲಕ ಎದುರುಗೊಳ್ಳಲು ಚಿತ್ರತಂಡ ಸಜ್ಜಾಗಿದೆ.
 
ಪ್ರಾರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿರುವ `ತೋತಾಪುರಿ` ಬಗ್ಗೆ ಚಿತ್ರರಂಗದಲ್ಲೂ ತುಂಬಾ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.
ತಾರಾಗಣದ ವಿಷಯದಲ್ಲೂ `ತೋತಾಪುರಿ` ಕಡಿಮೆಯೇನಿಲ್ಲ. ನವರಸ ನಾಯಕ ಜಗ್ಗೇಶ್ ಆದಿಯಾಗಿ `ಡಾಲಿ` ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
 
ಈ ಹಿಂದೆ ಎರಡನೇ ಮದುವೆ, ಗೋವಿಂದಾಯ ನಮಃ, ಆರ್ ಎಕ್ಸ್  ಸೂರಿ, ಶಿವಲಿಂಗ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ `ಮೋನಿಫ್ಲಿಕ್ಸ್ ಸ್ಟುಡಿಯೋಸ್` ಬ್ಯಾನರ್ ಅಡಿಯಲ್ಲಿ `ತೋತಾಪುರಿ` ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಂದಹಾಗೆ `ತೋತಾಪುರಿ`  ಭಾಗ 1 ಹಾಗೂ ಭಾಗ 2 ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ವಿಶೇಷ.
 
ಈ ಚಿತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ತಂತ್ರಜ್ಞರು ಕಾರ್ಯ ನಿರ್ವಹಿಸಿರೋದು ಹೆಚ್ಚುಗಾರಿಕೆ. ರಾಗನಿಧಿ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳಿಗೆ ವಿಜಯಪ್ರಸಾದ್ ಸಾಹಿತ್ಯವಿದೆ.  ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed