ಪೆಳ್ಳಿ ಚೂಪುಲು ನಿರ್ದೇಶಕರ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್
Posted date: 25 Thu, Aug 2022 09:02:06 AM
ಕೆಜಿಎಫ್, RRR ಸಿನಿಮಾಗಳ ಸಕ್ಸಸ್ ಬಳಿಕ ಸೌತ್ ಸಿನಿ ದುನಿಯಾದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಟ್ಟೇರುತ್ತಿವೆ. ಈ ಪಟ್ಟಿಗೀಗ ಮತ್ತೊಂದು ಚಿತ್ರ ಸೇರ್ಪಡೆಯಾಗ್ತಿದೆ‌. ಅದುವೇ ಕೀಡಾ ಕೋಲಾ.. ತೆಲುಗು ಚಿತ್ರರಂಗದ ಯಂಗ್ ಅಂಡ್ ಟ್ಯಾಲೆಂಟೆಡ್ ಡೈರೆಕ್ಟರ್, ಪೆಳ್ಳಿ ಚೂಪುಲು ಹಾಗೂ ಈ ನಾಗಾರಾಣಿಕಿ ಎಮೈಂದಿ ಎಂಬ ಎರಡು ಯಶಸ್ವಿ ಸಿನಿಮಾ ನಿರ್ದೇಶಿಸಿರುವ ತರುಣ್ ಭಾಸ್ಕರ್ ಧಾಸ್ಯಮ್  ಸಾರಥ್ಯದಲ್ಲಿ ಕೀಡಾ ಕೋಲಾ ಎಂಬ ಹೊಸ ಚಿತ್ರ ತಯಾರಾಗ್ತಿದೆ. ಯೂತ್ ಫುಲ್ ಎಂಟ್ರೈನರ್ ಸಿನಿಮಾ ನಿರ್ದೇಶಿಸ್ತಿದ್ದ ತರುಣ್ ಈ ಬಾರಿ  ಕ್ರೀಡಾ ಕೋಲಾ ಎಂಬ ಕ್ರೈಮ್ ಕಾಮಿಡಿ ಚಿತ್ರವನ್ನು ಸಿನಿಮಾ ಪ್ರೇಮಿಗಳಿಗೆ ಅರ್ಪಿಸಲು ಅಣಿಯಾಗ್ತಿದ್ದಾರೆ.
 
ವಿಜಿ ಸೈನ್ಮಾ ಬ್ಯಾನರ್‌ನಲ್ಲಿ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್  ನಿರ್ಮಾಣವಾಗಲಿರುವ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ನೆರವೇರಿದೆ. ನಿರ್ಮಾಪಕ ಸುರೇಶ್ ಬಾಬು, ನಾಯಕರಾದ ಸಿದ್ಧಾರ್ಥ್, ತೇಜ ಸಜ್ಜ, ನಂದು ಸೇರಿದಂತೆ ಹಲವು ಯುವ ನಿರ್ದೇಶಕರು ಈ  ಕಾರ್ಯಕ್ರಮಕ್ಕೆ ಭಾಗಿಯಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
 
ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು ಮತ್ತು ಕೌಶಿಕ್ ನಂದೂರಿ ಈ ಚಿತ್ರ ನಿರ್ಮಾಣ ಮಾಡಲಿದ್ದು, ಶೀರ್ಘದಲ್ಲಿ ಸ್ಟಾರ್ ಕಾಸ್ಟ್, ತಾಂತ್ರಿಕ ವರ್ಗ ಫೈನಲ್ ಆಗ್ತಿದ್ದಂತೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023 ರಲ್ಲಿ ಪ್ಯಾನ್ ಇಂಡಿಯಾ  ಕೀಡಾ ಕೋಲಾ ತೆರೆಗೆ ಬರಲಿದೆ.
 
ಚಿತ್ರಕಥೆ ಮತ್ತು ನಿರ್ದೇಶನ: ತರುಣ್ ಭಾಸ್ಕರ್ ಧಾಸ್ಯಮ್
 
ಪ್ರೊಡಕ್ಷನ್ ಹೌಸ್ - ವಿಜಿ ಸೈನ್ಮಾ

ನಿರ್ಮಾಪಕರು: ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು, ಕೌಶಿಕ್ ನಂದೂರಿ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed