ಬೆಳಕಿನ ಹಬ್ಬದಂದು ರಾಘವೇಂದ್ರ ರಾಜಕುಮಾರ್ ಅಭಿನಯದ ``ಬೆಳಕು`` ಚಿತ್ರ ತೆರೆಗೆ
Posted date: 27 Wed, Oct 2021 09:50:38 AM
ರಾಘವೇಂದ್ರ ರಾಜಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಭಿನ್ನ ಕಥಾಹಂದರದ ``ಬೆಳಕು`` ಚಿತ್ರ ನವೆಂಬರ್ 5 ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

ಬಿ.ಎನ್ ಗಂಗಾಧರ್ ಅರ್ಪಿಸುವ ಈ ಚಿತ್ರವನ್ನು ಅಂಕಿತ ಫಿಲಂಸ್ ಲಾಂಛನದಲ್ಲಿ ಬಿ.ಜಿ.ಶ್ರೇಯಸ್ಸ್ ನಿರ್ಮಿಸಿದ್ದಾರೆ.‌ 
ಬಿ.ಮಂಜುನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ, ಪ್ರಸಾದ್ ಬಾಬು ಛಾಯಾಗ್ರಹಣ ಹಾಗೂ ಶಿವಪ್ರಸಾದ್ ಯಾದವ್ ಸಂಕಲನ``ಬೆಳಕು`` ಚಿತ್ರಕ್ಕಿದೆ.

ರಾಘವೇಂದ್ರ ರಾಜಕುಮಾರ್, ಸುಧಾರಾಣಿ, ನಿರಿಕ್ಷಾ ಶೆಟ್ಟಿ, ಸಚಿನ್, ಅಶ್ವಿನಿ, ಮಧುಸೂದನ್ ಟಿ, ಮಂಜುನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed