ಶೋಕಿವಾಲ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್... U/A ಸರ್ಟಿಫಿಕೇಟ್
Posted date: 15 Sat, Jan 2022 07:30:01 PM
ಶೋಕಿವಾಲ ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಅಗಿದ್ದು... ಜನರ ಮುಂದೆ ಬಂದು ಗೆಲ್ಲುವ ಪರೀಕ್ಷೆ ತಯಾರಿ ನಡೆಸುತ್ತಿದ್ದಾನೆ... ಜನವರಿಯಲ್ಲಿ ಬರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ತಿಳಿಸಿದ್ದಾರೆ. ಈ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ರೀಲಿಸ್ ಅಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ ಮುಡಿ ಬಂದಿದೆ ಎಂದು ಹೇಳಿದ್ದರು.... ಈಗ ಮತ್ತೋಂದು ಹಾಡನ್ನು ಬಿಡಲು ತಯಾರಿ ನಡೆಯುತ್ತಿದೆ. ಹರಸಿ ಪ್ರೀತಿ ತೋರಿಸುತ್ತಿರುವ  ಎಲ್ಲರಿಗೂ  ಮತ್ತು ತಮಗೂ ನನ್ನ ಕಡೆಯಿಂದ ಈ ಮೂಲಕವಾಗಿಯೂ ಧನ್ಯವಾದವನ್ನು ತಿಳಿಸುತ್ತೆನೆ......

ನನಗೆ ಅವಕಾಶ ಕೊಟ್ಟ T.R. ಚಂದ್ರಶೇಖರ್ ಸರ್,  ಕಿಶೋರ್ ಸರ್ ಗೆ ತುಂಬಾ ಧನ್ಯವಾದಗಳು . 

ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್,  ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ,  ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ.

ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. 

ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು, 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. 


ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ಶೋಕಿವಾಲನಿಗಿದೆ. 
 
ನವೀನ್ ಕುಮಾರ್.ಎಸ್  ಕ್ಯಾಮೆರಾಮೆನ್,
ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ 
ಮೋಹನ್ ನೃತ್ಯ,
ವಿಕ್ರಮ್ ಮೋರ್ ಸಾಹಸ,
ಮೈಸೂರು ರಘು ರವರ ಕಲಾ ನಿರ್ದೇಶನ.....ಹೀಗೆ ಎಲ್ಲ technician ರವರ supportನಿಂದ ಶೋಕಿವಾಲ ಚೆನ್ನಾಗಿ ಮೂಡಿ ಬಂದಿದೆ.....

ಕೋರೋನ ಕ್ಲಿಯರ್ ಅಗಿ‌100% ಸಿಕ್ಕಿದ ಕೂಡಲೆ ಚಿತ್ರಮಂದಿರಕ್ಕೆ ಶೋಕಿವಾಲ ಎಂಟ್ರಿ ...

 
                      
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed