ಕರ್ಮಣ್ಯೇ ವಾಕಾರಸ್ತೆ ಶ್ಯಮಂತಕಮಣಿಯ ಸುತ್ತ... 3.5/5 ****
Posted date: 16 Sat, Jul 2022 04:50:41 PM
ಅರ್ಜುನನಿಗೆ ಮಾಡುವ ಉಪದೇಶ. ಮರ್ಡರ್ ಮಿಸ್ಟ್ರಿ‌ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್  ಕಥಾನಕವನ್ನು ನಿರ್ದೇಶಕ ಶ್ರೀಹರಿ ಆನಂದ್ ಅವರು ಕರ್ಮಣ್ಯೇ ವಾಕಾರಸ್ತೇ  ಚಿತ್ರದ ಮೂಲಕ ನಿರೂಪಿಸಿದ್ದಾರೆ. 
 
ಈ ಚಿತ್ರದಲ್ಲಿ ಒಬ್ಬ ಆರ್ಕಿಯಾಲಜಿಸ್ಟ್ ಹೃದಯಾಘಾತದಿಂದ ಮರಣಿಸಿದ ನಂತರ ನಡೆಯುವ   ಘಟನಾವಳಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು   ರೋಚಕವಾದ ಚಿತ್ರಕಥೆಯನ್ನು  ನಿರ್ದೇಶಕರು ಹೆಣೆದಿದ್ದಾರೆ.
 
ನಿನ್ನ ಕೆಲಸವನ್ನು ನೀನು ಮಾಡು, ಅದರ ಕರ್ಮ ಫಲಗಳನ್ನು ನನಗೆ ಬಿಡು ಎಂದು ಶ್ರೀಕೃಷ್ಣ  ಹೇಳುವಂತೆ ಈ ಚಿತ್ರದ ಕಥೆಯನ್ನು ನಿರೂಪಿಸಲಾಗಿದೆ.
 
ಮನುಷ್ಯನ ಭಾವನೆಗಳಿಗೆ ಬೆಲೆ ಕೊಡದ ಜಾತಕ, ಭವಿಷ್ಯವನ್ನು ನಂಬುವ ನಾಯಕ,  ಭಾವನೆಗಳನ್ನು ಗೌರವಿಸುವ, ನತದೃಷ್ಟ ಜಾತಕದ ಹಿನ್ನೆಲೆ ಹೊಂದಿದ ನಾಯಕಿ ಇವರಿಬ್ಬರ ನಡುವೆ ನಡೆಯುವ ಘಟನೆಗಳ ಮೂಲಕ ಚಿತ್ರ ಪ್ರಾರಂಭವಾಗುತ್ತದೆ. ಜಗಳದಿಂದ 
ಆರಂಭವಾಗುವ ಇವರಿಬ್ಬರ ಸ್ನೇಹ,  ನಂತರ ಪ್ರೀತಿಗೆ  ತಿರುಗುತ್ತದೆ.
 
ಸೂರ್ಯಕಾಂತ್ ಗುಣಕಿಮಠ ಅವರ ಸಾವಿನ ಪ್ರಕರಣದ ತನಿಖೆ ನಾಯಕಿ ಕೊಟ್ಟ ಕಂಪ್ಲೇಂಟ್ ನಿಂದ ರೀ ಓಪನ್ ಆಗುತ್ತದೆ. ಗುಣಕಿಮಠ ಸ್ವಂತ ಮಗಳ ರೀತಿ ನಾಯಕಿಯನ್ನು ಸಾಕಿ ಓದಿಸಿರುತ್ತಾರೆ.
 
ಅವರ ಸಾವು ಸಹಜ ಎಂದು ಪೋಲೀಸ್ ದಾಖಲೆಗಳಲ್ಲಿ ನಮೂದಾಗಿದ್ದರೂ, ನಾಯಕಿಗೆ ಅದು ವ್ಯವಸ್ಥಿತವಾಗಿ ನಡೆದಂಥ ಕೊಲೆ ಎಂಬ ಅನುಮಾನ ಬರುತ್ತದೆ. ಅವರ ಮರಣ ಸ್ವಾಭಾವಿಕವೋ, ಕೊಲೆಯೋ ಎಂದು ಪತ್ತೆ ಹಚ್ಚುವಂತೆ ನಾಯಕನಲ್ಲಿ ಆಕೆ ಕೇಳಿಕೊಳ್ಳುತ್ತಾಳೆ,  ಅದರ ಜಾಡನ್ನು ಹಿಡಿದು ಹೊರಟ ನಾಯಕ, ನಾಯಕಿಗೆ ಹಲವಾರು ಆಶ್ಚರ್ಯಗಳು ಅಲ್ಲಿ ಕಾಡಿರುತ್ತವೆ.
 
ಸಾವಿರಾರು ಕೋಟಿ ಬೆಲೆಬಾಳುವ ಒಂದು ಅತ್ಯಮೂಲ್ಯವಾದ ಮೃತ್ಯುಸಂಜೀವಿನಿ ಮಣಿ ಅದಾಗಿದ್ದು, ಎಲ್ಲಾ ಪ್ರಕರಣಗಳ ಹಿಂದೆ ಆ ಮಣಿ ಇರುವುದು ಗೊತ್ತಾಗುತ್ತದೆ. ಆರ್ಕಿಯಾಲಜಿಸ್ಟ್ ಆಗಿದ್ದ ಗುಣಕೀಮಠ್, ಒಬ್ಬ ದೇಶಭಕ್ತರು ಕೂಡ, ತಮಗೆ ಸಾವು ಯಾವಾಗಲಾದರೂ ಬರಬಹುದೆಂದು ಯೋಚಿಸಿ ಒಂದು ಅಮೂಲ್ಯವಾದ ದಾಖಲೆಯನ್ನು ತಾನು ಮರಣಿಸುವ ಹಿಂದಿನ ದಿನ ನಾಯಕಿಯ ಕೈಗೆ ನೀಡಿರುತ್ತಾರೆ. 
 
ಅದೊಂದು ಪಜಲ್ ಬಾಕ್ಸ್ ಆಗಿದ್ದು,  ಚೈನಾದಿಂದ ಸ್ಟೂಡೆಂಟ್  ಆಗಿ ಬಂದ ಡೋಲ್ಮಾ ಎಂಬ ಯುವತಿಯೂ ಅದಕ್ಕಾಗಿ ಹುಡುಕಾಡುತ್ತಿರುತ್ತಾಳೆ. ಆ ಮಣಿಯ ಕಥೆ ಪ್ರೇಕ್ಷಕರನ್ನು ನೂರಾರು ವರ್ಷಗಳ ಹಿಂದೆ ಕರೆದುಕೊಂಡು ಹೋಗುತ್ತದೆ. 
 
ಇತ್ತ ನಾಯಕ, ನಾಯಕಿ ಹಾಗೂ ಚೈನಾದಿಂದ ಬಂದ ಡೋಲ್ಮಾ  ಮೃತ್ಯು ಸಂಜೀವಿನಿ ಮಣಿಯನ್ನು ಹುಡುಕಿಕೊಂಡು ಬ್ರಹ್ಮಗಿರಿ ಬೆಟ್ಟಕ್ಕೆ ಹೊರಡುತ್ತಾರೆ. ಎಂ,ಎಲ್.ಎ. ನಿಜಗುಣ ಕೂಡ ಇದರ ಬೆನ್ನು  ಹತ್ತಿರುತ್ತಾನೆ. ಮುಂದೆ ಆ ಮಣಿ ಯಾರ ಕೈ ತಲುಪುತ್ತದೆ,  ಅಥವಾ ಸಿಗೋದೇ ಇಲ್ಲವೋ ಅಥವಾ ಅದರಿಂದ ಏನೇನೆಲ್ಲ ಘಟನೆಗಳು ಸಂಭವಿಸಿತು ಎಂದು ಹೇಳುವುದೇ ಕರ್ಮಣ್ಯೇ ವಾಕಾರಸ್ತೇ ಚಿತ್ರದ ಮೂಲ ಕಥಾವಸ್ತು. ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟಿ ಎಲ್ಲದರ 
ಮಿಳಿಯತವಾಗಿರುವ ಈ ಚಿತ್ರ ವೀಕ್ಷಕರಿಗೆ ಸಖತ್ ಥ್ರಿಲ್ಲಿಂಗ್ ಅನುಭವ ನೀಡುತ್ತದೆ.
 
ಶ್ರೀಹರಿ ಆನಂದ್ ಮೊದಲಬಾರಿಗೆ ನಿರ್ದೇಶನ ಮಾಡಿದರೂ ಒಬ್ಬ ಅನು ಅನುವಿಯಂತೆ ಕೆಲಸ ಮಾಡಿದ್ದಾರೆ. ಕರ್ಮ, ಕರ್ತೃ ಹಾಗೂ ಕ್ರಿಯೆ ಈ ಮೂರೂ ವಿಷಯಗಳ ಸುತ್ತ  ನಡೆಯೋ ಕಥೆ ಈ ಚಿತ್ರದಲ್ಲಿದೆ. ಮೃತ್ಯುಸಂಜೀವಿನಿ ಮಣಿಯನ್ನು ಹುಡುಕುವ ಪ್ರಯತ್ನದಲ್ಲಿ ಚಿತ್ರದ ಬಹುತೇಕ ಕಥನ ಸಾಗುತ್ತದೆ. ನಾಯಕ ಪ್ರತೀಕ್ ಸುಬ್ರಮಣ್ಯ, ನಾಯಕಿ ದಿವ್ಯಾಗೌಡ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉತ್ತರ ಬಾರತ ಮೂಲದ ಮಾಡೆಲ್ ಸಿರಿಸಿಂದ ಕೂಡ ತಮ್ಮ‌ಪಾತ್ರವನ್ನು  ಸಮರ್ಥವಾಗಿ 
ನಿಭಾಯಿಸಿದ್ದಾರೆ. ದಾಂಡೇಲಿಯ ಅರಣ್ಯ ಪ್ರದೇಶ, ಮಲ್ಪೆಯ ಕಡಲತೀರವನ್ನು ಸುಂದರವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ರುತ್ವಿಕ್ ಮುರುಳೀಧರ್ ಅವರ ಸಂಗೀತ ಕೇಳುವಂತಿದ್ದರೆ, ಉದಯಲೀಲಾ ಅವರ ಕ್ಯಾಮೆರಾ ಕೈಚಳಕ ಗಮನ ಸೆಳೆಯುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed