ಸಾಮರ್ಥ್ಯ ಸೆಪ್ಟೆಂಬರ್‌ನಲ್ಲಿ ಬಿಡುಗಡೆ
Posted date: 30 Sat, Jul 2022 11:30:16 AM
ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯ ಚಿತ್ರವು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ತಂಡ ತಿಳಿಸಿದೆ. ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ 14ನೇ ಚಿತ್ರ ಈ ಹಿಂದೆ ಲಾಲಿಹಾಡು, ಇಂದ್ರ, ಕೋಬ್ರ, ವಿರಾಟ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರಕ್ಕೆ ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್(ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ, ಸಾಹಸ-ಅರ್ಜುನ್, ಡ್ಯಾನಿ, ಕೌರವ ವೆಂಕಟೇಶ್, ವಿನೋದ್, ಸಂಕಲನ-ವೆಂಕಟೇಶ್-ಯುಡಿವಿ, ನೃತ್ಯ-ರಾಮು, ಸಹನಿರ್ದೇಶನ-ಎನ್ ಬಸವರಾಜು ಚೋರನಹಳ್ಳಿ, ನಿರ್ವಹಣೆ- ರಂಗಸ್ವಾಮಿ,  ತಾರಾಗಣದಲ್ಲಿ - ಬಾಲಾಜಿ ಶರ್ಮ, ಗಗನ ಮಧು, ಶೋಭರಾಜ್, ಅವಿನಾಶ್, ದಶರತ್ ಅಭಿ, ರವೀಂದ್ರನಾಥ್, ಪೆಟ್ರೋಲ್ ಪ್ರಸನ್ನ, ಮಡೆನೂರು ಮನು, ಸ್ವಾತಿ, ಶಶಿಕುಮಾರ್, ಮುಂತಾದವರಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಲವ್ & ಕ್ರೈಂ ಕಥಾ ವಸ್ತುವುಳ್ಳ ಈ ಕಥೆಯನ್ನು ಈಗಿನ ಕಾಲದ ಸಮಾಜಕ್ಕೆ ಹೊಂದಿಕೊಳ್ಳುವಂತಹ ಹಲವು ತಿರುವುಗಳು ಈ ಲವ್ ಸ್ಟೋರಿಯಲ್ಲಿದೆ.  
 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed