ಕೊಲೆಗಡುಕರ ಮೇಲೆ ಮರ್ಧಿನಿಯ ಬ್ರಹ್ಮಾಸ್ತ್ರ ***
Posted date: 17 Sat, Sep 2022 08:49:22 AM
ನಿರ್ದೇಶಕ : ಕಿರಣ್ ಕುಮಾರ್. ವಿ
ನಿರ್ಮಾಪಕ : ಭಾರತಿ ಜಗ್ಗಿ
ಸಂಗೀತ : ಹಿತನ್ ಹಾಸನ್
ಛಾಯಾಗ್ರಹಣ: ಅರುಣ್​ ಸುರೇಶ್​
ತಾರಾಗಣ : ರಿತನ್ಯ ಹೂವಣ್ಣ , ಅಕ್ಷಯ್​, ಮನೋಹರ್​, ಇಂಚರಾ. 

ಪುರಾಣಕಾಲದಲ್ಲಿ ಆದಿಶಕ್ತಿ‌ಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿ ಮಹಿಷಾಸುರಮರ್ದಿನಿ ಎನಿಸಿಕೊಂಡಿದ್ದಳು. ಈ ಕಲಿಯುಗದಲ್ಲಿ ದುರುಳರ ಹೆಡೆಮುರಿ ಕಟ್ಟಿ ಅವರ ದರ್ಪವನ್ನು ಮಟ್ಟ ಹಾಕುವ ವೀರವನಿತೆಯೊಬ್ಬಳ ಕಥೆಯನ್ನು ಮರ್ಧಿನಿ ಚಿತ್ರದ ಮೂಲಕ ನಿರ್ದೇಶಕ ಕಿರಣ್ ಕುಮಾರ್ ಮಾಡಿದ್ದಾರೆ. ಕಳೆದ ಶುಕ್ರವಾರ ತೆರೆಕಂಡಿರುವ ಆ ಚಿತ್ರದಲ್ಲಿ ನಾಯಕಿಯ ಹೆಸರೂ ಮರ್ದಿನಿ.  ಇದೊಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯೋ  ಕಥೆ ಹೊಂದಿರುವ  ಕ್ರೈಂ, ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವಾಗಿದ್ದು , ಒಬ್ಬ ಯುವತಿಯ  ಕೊಲೆಯಾದಾಗ  ಮಹಿಳಾ ಪೊಲೀಸ್ ಅಧಿಕಾರಿಯೊಬ್ಬಳು ಆ ಪ್ರಕರಣವನ್ನು  ತನಿಖೆ ಮಾಡುವ ಹಂತಗಳನ್ನು ಬಹಳ ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.  ನಾಯಕಿ ಮರ್ದಿನಿ (ರಿತನ್ಯ)  ಒಬ್ಬ ದಕ್ಷ ಪೊಲೀಸ್  ಅಧಿಕಾರಿಣಿ. ತನ್ನ ಪ್ರಾಮಾಣಿಕತೆ, ನಿಷ್ಠೆಗೆ ಹೆಸರುವಾಸಿ. ಮಕ್ಕಳ ಅಪಹರಣಕಾಋನ್ನು ಪತ್ತೆಹಚ್ಚಿ ರೌಡಿಗಳನ್ನು ಸದೆಬಡೆದು ಸರ್ಕಾರದಿಂದ ಪ್ರಶಂಸೆಯನ್ನೂ ಪಡೆಯುತ್ತಾಳೆ.
 
ಚಿಕ್ಕಮಗಳೂರಿಗೆ ವರ್ಗಾವಣೆ ಆಗುವ  ಮರ್ದಿನಿಗೆ  ಆರಂಭದಲ್ಲೇ ಎದುರಾಗುವ ಒಂದು ಮರ್ಡರ್ ಕೇಸ್ ದೊಡ್ಡ ಚಾಲೆಂಜ್ ಆಗುತ್ತದೆ. ಹುಡುಗಿಯೊಬ್ಬಳ ಕೊಲೆ ಕೇಸ್ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಾಜಾರಣಿಗಳು , ಪೋಲಿಸ್ ಹಾಗೂ  ಜನಸಾಮಾನ್ಯರ ಮೇಲೂ ಅನುಮಾನ ಬರುವಂತೆ ಮಾಡುತ್ತದೆ. ಈ ಕೊಲೆಯ ಹಿಂದಿರುವ ರೂವಾರಿಯನ್ನು ಹುಡುಕುವ ಹಾದಿಯಲ್ಲಿ ಹಲವು ತಿರುವುಗಳು ಎದುರಾಗುತ್ತಾ ಕ್ಲೈಮ್ಯಾಕ್ಸ್ ಒಂದು  ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ.
ಕೊಲೆಯಾದ  ಆಬಹುಡುಗಿ ಯಾರು, ಕೊಲೆಗೆ ಕಾರಣವೇನು.ಇದರ ಮೇನಗ ಪಿಲ್ಲರ್ ಯಾರು ಈ ಎಲ್ಲ ಪ್ರಶ್ನಗಳಿಗೆ  ಮರ್ದಿನಿ ಯಾವರೀತಿ ಉತ್ತರ  ಕಂಡುಕೊಂಡಳು ಎನ್ನುವುದೇ ಈ ಚಿತ್ರದ ಕೀಲೈನ್. 
 
ಇನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡಿರುವ  ರಿತನ್ಯ ಹೂವಣ್ಣ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.  ದಿಟ್ಟ ಪೊಲೀಸ್ ಅಧಿಕಾರಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಒಂದಿಷ್ಟು ಖಡಕ್ ಡೈಲಾಗ್ ಮೂಲಕ ಗಮನ ಸೆಳೆಯುವ ಈ ಪ್ರತಿಭೆ ಆ್ಯಕ್ಷನ್ ದೃಶ್ಯವನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ಪ್ರಥಮ ಅವಕಾಶದಲ್ಲೇ ಪಾತ್ರವನ್ನು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ . ಇದಲ್ಲದೆ ನಟ ಅಕ್ಷಯ್  ದ್ವಿತಿಯಾರ್ಧದಲ್ಲಿ ಬಂದು ಶಾಕ್ ನೀಡುತ್ತಾರೆ. ಕೂಟ್ಟ ಪಾತ್ರಕ್ಕೆ ನ್ಯಾಯ  ಒದಗಿಸಿದ್ದಾರೆ.
 
ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಜೀವತುಂಬಿದ್ದಾರೆ. ನಿರ್ದೇಶಕ ಕಿರಣ್ ಕುಮಾರ್  ಮರ್ಡರ್ ಮಿಸ್ಟ್ರಿಯ ಕಥೆಯನ್ನು ಪರಿಸರದ ನಡುವೆ ಬಹಳ ಕುತೂಹಲಕಾರಿಯಾಗಿ ಚಿತ್ರೀಕರಿಸಿದ್ದಾರೆ.  .  ರಾಜಕೀಯ, ಪೋಲಿಸ್  ಹಾಗೂ ಪತ್ರಕರ್ತರ ಕಾರ್ಯವೈಖರಿಯ ಸೂಕ್ಷ್ಮತೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇಂತಹ  ಕ್ರೈಂ, ಸಸ್ಪೆನ್ಸ್ , ಥ್ರಿಲ್ಲರ್   ಚಿತ್ರವನ್ನ ನ ನಿರ್ಮಿಸಿರುವ ಭಾರತಿ ಜಗ್ಗಿ ಅವರ ಸಾಹಸ  ಮೆಚ್ಚಬೇಕು. ಈ ಚಿತ್ರಕ್ಕೆ ಹಿತನ್ ಹಾಸನ್ ಅವರತಸಂಗೀತ‌ ನೀಡಿದ್ದು, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ಛಾಯಾಗ್ರಾಹಕ ಅರುಣ್ ಸುರೇಶ್ ವರ ಕ್ಯಾಮೆರಾ ವರ್ಕ್  ಕೂಡು ಸೊಗಸಾಗಿ ಮೂಡಿಬಂದಿದೆ. ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಪ್ರಿಯರಿಗೆ ಈ ಚಿತ್ರ ಹೆಚ್ಚು ಇಷ್ಟವಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed