ಸಂಸಾರಿಯಾದರೂ ಸನ್ಯಾಸ ಜೀವನ ನಡೆಸೋ ಅರ್ಜುನನ ಕಥೆ... 3/5 ***
Posted date: 02 Sun, Oct 2022 01:52:33 PM
ನಿರ್ಗತಿಕರು ತಮಗಿರುವ ಅವಕಾಶದಲ್ಲೆ ನೆಮ್ಮದಿಯಾಗಿರುತ್ತಾರೆ. ಇನ್ನು ಶ್ರೀಮಂತರಿಗೆ ಕಷ್ಟವೇ ಗೊತ್ತಿರುವುದಿಲ್ಲ. ಇದರ ನಡುವೆ  ಮದ್ಯಮ ವರ್ಗದ ಜನರ ಪಾಡು ಹೇಳತೀರದು. ಅಂಥಾ ಕುಟುಂಬಗಳಲ್ಲಿ ಯುವ ಹೃದಯಗಳ ಆಸೆ ಆಕಾಂಕ್ಷೆ ಬಯಕೆಗಳು,  ಅವುಗಳನ್ನು ಈಡೇರಿಸಿಕೊಳ್ಳಲು ಆಗದೆ ಪರಿತಪಿಸುವ ಪರಿ, ತೊಂದರೆ ಮುಂತಾದ ಅಂಶಗಳ ಮೇಲೆ ಒಂದಷ್ಟು ಚಲನಚಿತ್ರಗಳು ನಿರ್ಮಾಣವಾಗಿವೆ. ಆ ಎಲ್ಲ ಚಿತ್ರಗಳಿಗಿಂತ  ವಿಭಿನ್ನವಾದ  ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಈಶ್ವರ ಪೋಲಂಕಿ ಅವರು ಅರ್ಜುನ ಸನ್ಯಾಸಿ  ಎಂಬ ಚಿತ್ರವನ್ನು ಮನರಂಜನಾತ್ಮಕ ಅಂಶಗಳೊಂದಿಗೆ ಹೇಳಿದ್ದಾರೆ. 
 
ಫ್ಯಾಮಿಲಿ ಎಂಟರ್‌ಟೈನರ್ ಕಂಟೆಂಟ್ ಇಟ್ಟುಕೊಂಡು ನೋಡುಗನಿಗೆ ಎಲ್ಲೂ ಬೋರ್ ಆಗದಂತೆ ಇಡೀ ಚಿತ್ರವನ್ನು ತೆಗೆದುಕೊಂಡು 
ಹೋಗಿದ್ದಾರೆ. ಸಾಮಾನ್ಯವಾಗಿ ಬಹುತೇಕ ಮಿಡಲ್ ಕ್ಲಾಸ್ ಫ್ಯಾಮಿಲಿಗಳಲ್ಲಿ ಇಂಥ  ಪ್ರಕರಣಗಳು ನಡೆಯುತ್ತಿದ್ದರೂ ಅದು ಬೆಳಕಿಗೆ ಬರುವುದಿಲ್ಲ, ಆದರೆ ನಿರ್ದೇಶಕ ಈಶ್ವರ ಪೋಲಂಕಿ  ಅಂಥಾ ವಿಷಯಗಳನ್ನು ಓಪನ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
 
ಈ ಚಿತ್ರದ ಕಥೆ ತುಂಬಾ ಸಿಂಪಲ್, ನಾಯಕ ಅರ್ಜುನ್ ಒಬ್ಬ ಆಟೋ ಚಾಲಕ, ತಂದೆ ತಾಯಿ ಜೊತೆಗೆ ಪುಟ್ಟ ಮನೆಯೊಂದರಲ್ಲಿ ಹಾಗೂ ಹೀಗೂ ಜೀವನ ನಡೆಯುತ್ತಿರುತ್ತೆ. 
 
ಮುಂದೆ ನಾಯಕನಿಗೆ ಮದುವೆಯಾಗುತ್ತದೆ. ಸುಂದರವಾದ ಹೆಂಡತಿ ಜೊತೆಗಿದ್ದರೂ ಏಕಾತವಾಗಿರಲು ಮನೆಯಲ್ಲಿ ಒಂದು ರೂಮಿರಲ್ಲ. ಅದು ಮಳೆಗಾಲ ಬೇರೆ, ಒಂದು ಬೆಡ್ ರೂಮ್  ಇಲ್ಲದ ಆ ಮನೆಯಲ್ಲಿ ನಾಯಕನ ಸಾಂಸಾರಿಕ ಜೀವನ ಹೇಗೆ ಸಾಗುತ್ತದೆ? ಹೊಸದಾಗಿ  ಮದುವೆಯಾಗಿ ಬಂದ ಆ ಯುವತಿಯ ಪಾಡೇನು ಎಂಬುದನ್ನು ಹಾಸ್ಯಮಯವಾಗಿ  ಯಾರ ಮನಸಿಗೂ ಹರ್ಟ್ ಆಗದ ರೀತಿಯಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ಈಶ್ವರ್. ಕಥೆ ಇದಿಷ್ಟೇ ಅಲ್ಲ, ಮುಂದೆ ಹಲವಾರು ಟ್ವಿಸ್ಟ್ ಗಳಿವೆ.  ಅದನ್ನೆಲ್ಲ ನೀವೇ ನೋಡಿದರೆ ಚೆನ್ನ. ಇನ್ನೇಕೆ ತಡ, ಈಗಲೇ ನಮ್ಮ ಫ್ಲಿಕ್ಸ್ ನಲ್ಲಿ ಅರ್ಜುನನ ಸನ್ಯಾಸ ಜೀವನಕ್ಕೆ ಮುಕ್ತಿ ಕೊಡಿ.
ಮೊದಲಬಾರಿಗೆ ಬಣ್ಣ ಹಚ್ಚಿರುವ ಸಿ.ಸಿ.ರಾವ್  ಅವರು ಆಟೋ ಚಾಲಕನಾಗಿ  ಕೊಟ್ಟ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಮುದ್ದಾದ ಹೆಂಡತಿಯಾಗಿ  ಸೌಂದರ್ಯಗೌಡ  ಮನೋಜ್ಣವಾಗಿ ‌ನಟಿಸಿದ್ದಾರೆ. 
 
ಮದ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಸಾಂಸಾರಿಕ ಸಮಸ್ಯೆಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಈ ಚಿತ್ರದಲ್ಲಿರುವ ಎರಡು ಹಾಡುಗಳೂ ಸಂಸುಂದರವಾಗಿಯೇ ಮೂಡಿಬಂದಿವೆ. ಕೆ. ಹೇಮಂತ್ ಕುಮಾರ್ ಅವರ ಸಂಗೀತ ಚಿತ್ರಕಥೆಗೆ  ಮತ್ತೊಂದು ಆಯಾಮ ನೀಡಿದೆ. ಇನ್ನು ವಿರೇಶ್ ಎನ್‌ಟಿಎ ಹಾಗೂ ರವಿ ಬೆಳಗುಂದಿ ಅವರ ಕ್ಯಾಮೆರಾ ವರ್ಕ್ಗೆ ಹೆಚ್ಚಿನ  ಅಂಕ ನೀಡಬೇಕು. ವಿಜಯ್ ಕಿತ್ತೂರು ಅವರ ಸಂಭಾಷಣೆಗಳು ನೋಡುಗರನ್ನು ಹಿಡಿದಿಡುತ್ತವೆ.  ಹಿರಿಯನಟಿವ ಅಭಿನಯ, ನಾಗೇಂದ್ರಷಾ, ಸೂರಜ್, ರೂಪ ರಾಯಪ್ಪ ಎಲ್ಲರ ಪಾತ್ರಗಳೂ ಕಥೆಗೆ ಪೂರಕವಾಗಿ ಮೂಡಿಬಂದಿವೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed