67ನೇ ಪಾರ್ಲೆ ಫಿಲ್ಮ್ಫೇರ್ ಧನಂಜಯ ಮತ್ತು ಯಜ್ಞಾ ಶೆಟ್ಟಿ ಕನ್ನಡದ ಅತ್ಯುತ್ತಮ ನಟ ನಟಿ
Posted date: 11 Tue, Oct 2022 01:44:59 PM

ಧನಂಜಯ ಮತ್ತು ಯಜ್ಞಾ ಶೆಟ್ಟಿ ಅವರು ಕನ್ನಡದ ಅತ್ಯುತ್ತಮ ನಟ (ಪುರುಷ) ಮತ್ತು ಅತ್ಯುತ್ತಮ ನಟಿ(ಮಹಿಳೆ) ಪ್ರಶಸ್ತಿಯನ್ನು ಪಡೆದರು, “ಆಕ್ಟ್ 1978” ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು

ಸೂರ್ಯ ಮತ್ತು ಲಿಜೋಮೋಲ್ ಜೋಸ್ ಅವರು ಕ್ರಮವಾಗಿ ತಮಿಳಿನ ಅತ್ಯುತ್ತಮ ನಟ (ಪುರುಷ) ಮತ್ತು ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನು ಪಡೆದರು ಮತ್ತು “ಜೈ ಭೀಮ್” ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು

ಅಲ್ಲು ಅರ್ಜುನ್ ಮತ್ತು ಸಾಯಿ ಪಲ್ಲವಿ ತೆಲುಗಿನ ಅತ್ಯುತ್ತಮ ನಟ (ಪುರುಷ) ಮತ್ತು ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನು ಪಡೆದುಕೊಂಡರೆ, “ಪುಷ್ಪಾ: ದಿ ರೈಸ್- ಭಾಗ 1” ಅತ್ಯುತ್ತಮ ತೆಲುಗು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು

ಬಿಜು ಮೆನನ್ ಮತ್ತು ನಿಮಿಷಾ ಸಜಯನ್ ಅವರು ಅತ್ಯುತ್ತಮ ನಟ (ಪುರುಷ) ಮತ್ತು ಅತ್ಯುತ್ತಮ ನಟಿ (ಮಹಿಳೆ) ಮಲಯಾಳಂ ಪ್ರಶಸ್ತಿಯನ್ನು ಪಡೆದರು, “ಅಯ್ಯಪ್ಪನುಮ್ ಕೋಶಿಯುಮ್” ಅತ್ಯುತ್ತಮ ಮಲಯಾಳಂ ಚಿತ್ರ ಎಂದು ಗುರುತಿಸಿಕೊಂಡಿತು

ಆ್ಯಕ್ಟ್ 1978, ಜೈ ಭೀಮ್, ಪುಷ್ಪ: ದಿ ರೈಸ್- ಭಾಗ 1, ಮತ್ತು ಅಯ್ಯಪ್ಪನುಮ್ ಕೊಶಿಯುಮ್ ಕ್ರಮವಾಗಿ ಅತ್ಯುತ್ತಮ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಪ್ರಶಸ್ತಿಗಳನ್ನು ಪಡೆದುಕೊಂಡಿತು

ಬೆಂಗಳೂರು ಭಾರತ, 10 ಅಕ್ಟೋಬರ್ 2022: ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳನ್ನು ಒಳಗೊಂಡಿರುವ ಭಾರತೀಯ ಚಲನಚಿತ್ರಗಳ ಸಿನೆಮಾಗಳ ಶ್ರೀಮಂತಿಕೆಯನ್ನು ಸಾರುವ 67 ನೇ ಪಾರ್ಲೆ ಫಿಲ್ಮ್ಫೇರ್ ಸೌತ್ 2022 ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಇತ್ತೀಚೆಗೆ ಕಮರ್ ಫಿಲ್ಮ್ ಫ್ಯಾಕ್ಟರಿ ಆಯೋಜಿಸಿತು. 2020 ಮತ್ತು 2021 ರ ನಡುವೆ ಎಲ್ಲಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳ ಪೈಕಿ ದಕ್ಷಿಣ ಭಾರತದ ಅತ್ಯುತ್ತಮ ಚಲನಚಿತ್ರಗಳು, ನಟರು ಮತ್ತು ತಾಂತ್ರಿಕ ಪ್ರತಿಭೆಗಳನ್ನು ಅಸ್ಕರ್ ಬ್ಲ್ಯಾಕ್ ಲೇಡಿಯೊಂದಿಗೆ ಗೌರವಿಸಲಾಯಿತು. ಈ ಮೆಗಾ ಸಂಭ್ರಮಾಚರಣೆಯು ಉದ್ಯಾನ ನಗರಿ, ಬೆಂಗಳೂರಿನಲ್ಲಿ ಅಕ್ಟೋಬರ್ 9, 2022 ರಂದು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು.

ಕಮರ್ ಫಿಲ್ಮ್ ಫ್ಯಾಕ್ಟರಿಯೊಂದಿಗೆ 67 ನೇ ಪಾರ್ಲೆ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ 2022 ಕಾರ್ಯಕ್ರಮ ಪ್ರೇಕ್ಷಕರಿಗೆ ಗ್ಲಾಮರ್ ಮತ್ತು ಮನರಂಜನೆಯನ್ನು ನೀಡಿತು. ಎಲ್ಲಾ ನಾಲ್ಕು ಚಲನಚಿತ್ರ ಉದ್ಯಮಗಳ ಸೆಲೆಬ್ರಿಟಿಗಳು ಈ ಸಂಭ್ರಮಾಚರಣೆಗಾಗಿ ಒಟ್ಟುಗೂಡಿದರು. ಎರಡು ವರ್ಷಗಳ ಬಳಿಕ ಪ್ರೇಕ್ಷಕರ ಮುಂದೆ ಲೈವ್ ಆಗಿ ಕಾರ್ಯಕ್ರಮ ನಡೆದ ಕಾರಣಕ್ಕೆ ಈ ವರ್ಷದ ಫಿಲ್ಮ್ಫೇರ್ ವಿಶೇಷವಾಗಿತ್ತು. ಭಾರತೀಯ ಚಿತ್ರರಂಗದ ಭವ್ಯವಾದ ವೇದಿಕೆಯಲ್ಲಿ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್ ಮತ್ತು ಐಂದ್ರಿತಾ ರೇ ಅವರಂತಹ ಸೆಲೆಬ್ರಿಟಿ ದಿವಾಸ್ ಅದ್ಭುತ ಪ್ರದರ್ಶನಗಳನ್ನು ನೀಡಿದರು. ಅವರು ಬೀಟ್ಗಳಲ್ಲಿ ಪ್ರೇಕ್ಷಕರನ್ನು ಒಳಗೊಳ್ಳುವಂತೆ ಮಾಡಿದರು. ಗುಡಿಲೋ ಬಡಿಲೋ, ಅಂಧ ಅರಬಿ, ಬುಟ್ಟಬೊಮ್ಮ, ಮತ್ತು ಹೆಚ್ಚಿನ ಜನಪ್ರಿಯ ಹಿಟ್ ಹಾಡುಗಳಿಂದ ಗಮನ ಸೆಳೆದಿದ್ದ ಪೂಜಾ ಹೆಗ್ಡೆ ತನ್ನ ನೃತ್ಯದ ಮೂಲಕ ಪ್ರೇಕ್ಷಕರನ್ನು ಸೆಳೆದರು, ಅವರು ರಾತ್ರಿಯ ಟಾಪ್ ಎಂಟರ್ಟೈನರ್ ಆಗಿದ್ದರು. ಮೃಣಾಲ್ ಠಾಕೂರ್ ಅವರು ಊ ಸೊಲ್ರಿಯಾ ಮಾಮಾ, ಕಣ್ಣಿಲ್ ಕಣ್ಣಿಲ್, ಪೂವೈ ಪೂವೈ ಮೊದಲಾದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಈ ಮಧ್ಯೆ, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್ ಮತ್ತು ಐಂದ್ರಿತಾ ರೇ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ನೀಡಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಕರ್ಷಕ ಜೋಡಿಗಳಾದ ದಿಗಂತ್ ಮತ್ತು ರಮೇಶ್ ಅರವಿಂದ್ ಅವರು ನಡೆಸಿಕೊಟ್ಟರು. ಅವರು ಪ್ರೇಕ್ಷಕರಿಗೆ ಮತ್ತು ಗಣ್ಯರಿಗೆ ಆ ಸಂಜೆಯನ್ನು ವಿನೋದದಿಂದ ತುಂಬುವಂತೆ ಮಾಡಿದರು.

ಈ ವರ್ಷದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಲ್ಲು ಅರವಿಂದ್ ಅವರಿಗೆ ನೀಡಲಾಗಿದೆ. 100 ವರ್ಷ ಪೂರೈಸಿದ ತನ್ನ ತಂದೆಗೆ ಪ್ರಶಸ್ತಿಯನ್ನು ಸಮರ್ಪಿಸಿದ ಕ್ಷಣದಲ್ಲಿ ಅವರ ಪತ್ನಿ ವೇದಿಕೆಯಲ್ಲಿ ಮೊದಲ ಬಾರಿಗೆ ಅವರನ್ನು ಹೊಗಳಲು ಈ ಅವಕಾಶವನ್ನು ಬಳಸಿಕೊಂಡರು. ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ತಾರೆ, ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾಕತಾಳೀಯವೆಂದರೆ, ಅದು ಅವರ ಮರಣದ ವಾರ್ಷಿಕೋತ್ಸವದ ದಿನವೂ ಆಗಿತ್ತು.

ಪುಷ್ಪ: ದಿ ರೈಸ್ - ಭಾಗ 1 ಚಿತ್ರವು ತೆಲುಗು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಾಗ ಇಡೀ ತಂಡವು ಈ ಸಂತೋಷವನ್ನು ಆಚರಿಸಿತು. ಆಕ್ಷನ್ ಚಲನಚಿತ್ರದ ಅವರ ಅತ್ಯುತ್ತಮ ಅಭಿನಯಕ್ಕಾಗಿ, ಅಲ್ಲು ಅರ್ಜುನ್ ಅತ್ಯುತ್ತಮ ನಟ (ಪುರುಷ)

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed