ಭೂನಾಟಕ ಮಂಡಳಿ ಈವಾರ ತೆರೆಗೆ
Posted date: 19 Wed, Oct 2022 05:45:05 PM
ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಪುತ್ರ ಜಿ.ವಿ.ರಾಘವೇಂದ್ರ ಅಯ್ಯರ್ ಅವರ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ಭೂನಾಟಕಮಂಡಳಿ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.  ಜೀವಿ ಅಯ್ಯರ್ ಸಿನಿಮಾಲೋಕ ಡಿಜಿಟಲ್ ಸ್ಟುಡಿಯೋವೊಂದನ್ನು ನಡೆಸುತ್ತಿರುವ ಇವರು ಜಿವಿ ಅಯ್ಯರ್ ಪ್ರೊಡಕ್ಷನ್ಸ್ ಸಂಸ್ಥೆ ಆರಂಭಿಸಿ ಅದರ ಮೂಲಕ ಭೂನಾಟಕಮಂಡಳಿ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 
 
ನಶಿಸಿ ಹೋಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಚಿತ್ರ ಇದಾಗಿದೆ. ಅರಿಯದ ವಯಸಿನಲ್ಲಿ ಮಕ್ಕಳು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು, ಅದರಿಂದಾಗುವ ಪರಿಣಾಮಗಳನ್ಬು ಈ ಚಿತ್ರ ಹೇಳಲಿದೆ. ಸ್ನೇಹಿತರ ಚಾಲೆಂಜಿಗೆ ಕಟ್ಟುಬಿದ್ದು ಮನೆಬಿಟ್ಟು ಹೋಗಿ ತೊಂದರೆ ಅನುಭವಿಸುವ  ಬಾಲಕನ  ಕಥೆಯಿದು. ಒಬ್ಬ ಹುಡುಗನ ಕಥೆಯಿದಾದರೂ ಇಲ್ಲಿ ಹಲವಾರು ಬಣಗಳು ಸೇರುತ್ತವೆ. ಮಾ.ತುಷಾರ್ ಪ್ರಮಖ ಪಾತ್ರದಲ್ಲಿ ನಟಿಸಿದ್ದು, ಗಾಯಕ ರಾಜೇಶ್ ಕೃಷ್ಣನ್, ಸ್ಪರ್ಷ ರೇಖಾ ತಂದೆ- ತಾಯಿಯಾಗಿ ನಟಿಸಿದ್ದಾರೆ. ಬಹುಭಾಷಾ ಹಿರಿಯ ಕಲಾವಿದ ಗೋಟೂರಿ ಅವರು ಬಾಲಕನ ತಾತನಾಗಿ ಕಾಣಿಸಿಕೊಂಡಿದ್ದಾರೆ.
 
ಭೂನಾಟಕ ಮಂಡಳಿ ಚಿತ್ರಕ್ಜೆ  ರಾಘವೇಂದ್ರ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ರಾಘವೇಂದ್ರ, ಇದು ನೈಜಘಟನೆ ಆಧಾರಿತ ಚಿತ್ರವೂ ಆಗಿದ್ದು, ಮಕ್ಕಳ ಎದುರೇ ತಪ್ಪು ಮಾಡುವವರಿಗೆ ಮಕ್ಕಳಿಂದಲೇ ಸಂದೇಶ ಸಂದೇಶ ಹೇಳುವ ಪ್ರಯತ್ನ. ತಂದೆ ತಾಯಿಗಳಿಗೆ ಅವರ ಸಿನಿಮಾ   ಆಗಿ ಕಂಡರೆ, ಮಕ್ಕಳಿಗೆ ಮಕ್ಕಳ ಸಿನಿಮಾ ಥರಾನೇ ಕಾಣಿಸುತ್ತದೆ. ನಮ್ಮ ಸಂಸ್ಥೆಯಿಂದ  ಪ್ರತಿವರ್ಷ ಸಿನಿಮಾ ಮಾಡುವ ಉದ್ದೇಶವಿದೆ ಎಂದು ಹೇಳಿದ್ದಾರೆ. ತುಂಬಾ ಲೇಯರ‍್ಸ್  ಒಳಗೊಂಡಿರುವ ಹಲವಾರು ದೃಷ್ಟಿಕೋನಗಳ ಚಿತ್ರವಿದು.
 
ಸಮಾಜ, ಮಕ್ಕಳು, ಮನೆ ವಾತಾವರಣ, ಆಚೆಯ ವಾತಾವರಣ ಎಲ್ಲವನ್ನೂ ಸೇರಿಸಿ ತುಂಬಾ ಶ್ರಮವಹಿಸಿ ಮಾಡಿರೋ ಸಿನಿಮಾ.  ಮಕ್ಕಳಿಗೆ ನಾವು ಏನಾದರೂ ಹೇಳುವಾಗ ಅದನ್ನು ಯಾವ ಸಂದರ್ಭದಲ್ಲಿ, ಹೇಗೆ ಹೇಳುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. 
 
ವೃಧ್ದಾಶ. ಪೋಷಕರ ಒತ್ತಡದಿಂದ ಮಕ್ಕಳು ಹೇಗೆ ಗಟ್ಟಿ ನಿರ್ಧಾರ ತೆಗೆದುಕೊಳ್ತಾರೆ ಎಂಬುದನ್ನೂ  ಚಿತ್ರದಲ್ಲಿ ಹೇಳಲಾಗಿದೆ.
ಗುರುರಾಜ ಮಾರ್ಪಳ್ಳಿ ಅವರ ಸಂಗೀತ, ಸಾಹಿತ್ಯವಿದೆ. ರಾಜು ಶಿರಾಳಕೊಪ್ಪ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed