ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ `ಕರುನಾಡ ಶಾಲೆ` ಸಿನಿಮಾದ ಸಾಂಗ್ ರಿಲೀಸ್…
Posted date: 07 Wed, Sep 2022 08:38:06 AM
ಶಿಕ್ಷಣ ಖಾಸಗೀಕರಣವಾದ ಮೇಲಂತೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯಂತೂ ಅಧಪತನದತ್ತ ಸಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರು ಅದು ಯಶಸ್ಸು ಕಂಡಿಲ್ಲ. ಹೀಗಿದ್ಮೇಲೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿವರಿಸೋದು ಬೇಕಾಗಿಲ್ಲ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲಿರುವ ಪ್ರಯತ್ನಕ್ಕೆ ಕರುನಾಡ ಶಾಲೆ ಸಿನಿಮಾ ಕೈ ಹಾಕಿದೆ.

ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ   ಚಿತ್ರತಂಡವು ಶಿಕ್ಷಕರ ದಿನಾಚರಣೆ ದಿನದಂದು ಚಿತ್ರದ ಸಾಂಗ್ ಬಿಡುಗಡೆಗೊಳಿಸಿದ ಚಿತ್ರತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿತು. ಸರ್ಕಾರಿ ಶಾಲೆಗಳ ಪ್ರಗತಿಗಾಗಿ ನಾಯಕ ಪಡುವ ಸಾಹಸವೆ ಚಿತ್ರದ ಪ್ರಮುಖ ಕಥಾವಸ್ತು ಎಂಬುದಾಗಿ ಚಿತ್ರತಂಡ ತಿಳಿಸಿದೆ. 

ಬಾಲ್ಯದ ನೆನಪುಗಳನ್ನು ನೆನಪಿಸುವಂಥ ದೃಶ್ಯಗಳನ್ನು ಸಂಯೋಜಿಸಲಾಗಿರುವ ಗೀತೆಯೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿತು. ನಾಯಕನ ತಂದೆ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ಅಭಿನಯಿಸಿದ್ದು, ಆಯುರ್ ಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ರಿಯಾ ದೇವಾಡಿಗ, ರಾಜೀವ್ ಕೊಠಾರಿ, ರಘು ಪಾಂಡೇಶ್ವರ, ಸ್ಪೂರ್ತಿ ದೊಡ್ಮನೆ, ಸ್ಮಿತಾ, ಉಲ್ಲಾಸ್, ಮನೀಶ್, ನಾಗರಾಜ್ ಅಭಿನಯಿಸಿದ್ದಾರೆ.

ಜಿ.ಆರ್. ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಮುತ್ತಾರೀಫ್ ತೆಕ್ಕಟ್ಟೆಯವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನವಿದ್ದು, ದಿಲ್ ಶಾದ್ ಬಂಡವಾಳ ಹೂಡಿದ್ದಾರೆ. ಗಿರೀಶ್, ಯೋಗೇಂದ್ರ ಕನ್ನುಕೆರೆ, ಸಚಿನ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡರೆ, ಆಕಾಶ್ ಪರ್ವರ  ಸಂಗೀತ, ಆಯುರ್ ಸ್ವಾಮಿ ಸಾಹಿತ್ಯ - ಸಂಕಲನ, ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯನ, ಜಯರಾಮ್ ಆಲೂರು ಛಾಯಾಗ್ರಹಣ, ರಾಘವರ ನೃತ್ಯ ನಿರ್ದೇಶನವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed